ಮಲಗಲು ರೆಡಿಯಾದ ಚಂದ್ರಯಾನ! ನಿದ್ದೆಯಿಂದ ಮತ್ತೆ ಏಳ್ತಾರಾ ವಿಕ್ರಮ್‌, ಪ್ರಗ್ಯಾನ್‌?

masthmagaa.com:

ಚಂದ್ರನ ಅಂಗಳದಲ್ಲಿ ಪ್ರಗ್ಯಾನ್‌ ರೋವರ್‌ ತನ್ನ ವೈಜ್ಞಾನಿಕ ಅನ್ವೇಷಣೆಗಳನ್ನ ಮುಂದುವರೆಸಿದೆ. ಈ ಬಗ್ಗೆ ಇಸ್ರೋ ನಿರಂತರವಾಗಿ ಅಪ್‌ಡೇಟ್‌ ಕೊಡ್ತಿದೆ. ಇದೀಗ ವಿಕ್ರಮ್‌ ಲ್ಯಾಂಡರ್‌ನಿಂದ ಪ್ರಗ್ಯಾನ್‌ ರೋವರ್‌ ಸುಮಾರು 100 ಮೀಟರ್‌ನಷ್ಟು ದೂರ ಚಲಿಸಿದೆ ಅಂತ ಇಸ್ರೋ ಹೇಳಿದೆ. ಈ ಬಗ್ಗೆ Xನಲ್ಲಿ ಪೋಸ್ಟ್‌ ಹಾಕಿರುವ ಇಸ್ರೋ, ಪ್ರಗ್ಯಾನ್‌ ನಾಟ್‌ ಔಟ್‌ 100 ಮೀಟರ್‌ ಚಲಿಸಿದ್ದು, ಪ್ರಯಾಣವನ್ನ ಮುಂದುವರೆಸಲಿದೆ ಅಂತ ಹೇಳಿದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಈ ಎರಡೂ ವ್ಯವಸ್ಥೆಗಳು ನಿದ್ರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದೇವೆ. ಲ್ಯಾಂಡರ್‌ ರಾತ್ರಿಯನ್ನ ತಡೆದುಕೊಳ್ಳಬೇಕಾಗಿರೋದ್ರಿಂದ ಒಂದು ಅಥ್ವಾ ಎರಡು ದಿನಗಳಲ್ಲಿ ಸ್ಲೀಪಿಂಗ್‌ ಪ್ರೊಸೆಸ್‌ ಶುರು ಮಾಡಲಿದ್ದೇವೆ ಅಂತ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌ ಹೇಳಿದ್ದಾರೆ. ಅಂದ್ಹಾಗೆ 14 ದಿನಗಳ ರಾತ್ರಿ ಕಳೆದ ಬಳಿಕ ಮತ್ತೆ 15ನೇ ದಿನ ಚಂದ್ರನಲ್ಲಿ ಬೆಳಕಾಗುತ್ತದೆ. ಆಗ ರೋವರ್ ಮತ್ತು ಲ್ಯಾಂಡರ್‌ಗೆ ಸೂರ್ಯನ ಬಿಸಿಲು ತಾಗಿ ಅವುಗಳಲ್ಲಿನ ಸೋಲಾರ್ ಫಲಕಗಳು ಚಾಲ್ತಿಗೊಳ್ಳಬಹುದು. ಒಂದು ವೇಳೆ ಸೋಲಾರ್ ಫಲಕಗಳು ಚಾಲ್ತಿಗೊಂಡು ಇಂಧನ ಭರ್ತಿಯಾದರೆ ಮತ್ತೆ ಎಂದಿನಂತೆ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಲಿವೆ ಅಂತ ಮಾಹಿತಿ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply