ಬಾಂಗ್ಲಾದೇಶ: ಒಂದೇ ರಾತ್ರಿ 14 ಹಿಂದೂ ದೇವಾಲಯಗಳ ಮೇಲೆ ಸರಣಿ ದಾಳಿ

masthmagaa.com:

ವಿಶ್ವದ ಹಲವು ಭಾಗಗಳಲ್ಲಿ ಹಿಂದೂ ದೇವಾಲಯಗಳನ್ನ ಟಾರ್ಗೆಟ್‌ ಮಾಡಿ ಧ್ವಂಸಗೊಳಿಸೋದು ಜಾಸ್ತಿಯಾಗ್ತಿದೆ. ಇದೀಗ ಪಕ್ಕದ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳನ್ನ ನಾಶಮಾಡಲಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 14 ದೇವಾಲಯಗಳನ್ನ ಒಂದೇ ರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಶನಿವಾರ ರಾತ್ರಿ ಘಟನೆ ನಡೆದಿದ್ದು, ದೇವಾಲಯಗಳ ಮೇಲೆ ಸರಣಿ ದಾಳಿ ಮಾಡಿದ್ದಾರೆ. ಶಾಂತಿ ಕದಡುವ ಯತ್ನ ಇದಾಗಿದೆ. ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ದೇವಾಲಯಗಳಲ್ಲಿನ ವಿಗ್ರಹಗಳ ಮೇಲೆ ದಾಳಿ ಮಾಡಿ ಹಾನಿಗೊಳಿಸಲಾಗಿದೆ. ಕೆಲ ವಿಗ್ರಹಗಳು ದೇವಾಲಯದ ಕೊಳಗಳಲ್ಲಿ ಪತ್ತೆಯಾಗಿವೆ ಅಂತ ಅಲ್ಲಿನ ಹಿಂದೂ ಸಮುದಾಯದ ಮುಖಂಡ ವಿದ್ಯನಾಥ್‌ ಬರ್ಮನ್‌ ಹೇಳಿದ್ದಾರೆ. ಇತ್ತ ಈ ಪ್ರದೇಶದಲ್ಲಿ ಯಾವುದೇ ಗಲಾಟೆ ಇಲ್ದೇ ಶಾಂತಿಯಿತ್ತು. ಮುಸ್ಲಿಂ ಸಮುದಾಯದವ್ರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇರ್ಲಿಲ್ಲ. ಈ ಕೃತ್ಯವನ್ನ ಯಾರು ಮಾಡಿದ್ದಾರೆ ಅಂತ ತಿಳಿದಿಲ್ಲ ಅಂತ ಹಿಂದೂ ಸಮುದಾಯದ ಮತ್ತೊಬ್ಬ ಲೀಡರ್‌ ಸಮರ್‌ ಚಟರ್ಜಿ ತಿಳಿಸಿದ್ದಾರೆ. ಅಲ್ದೇ ಈ ಘಟನೆ ಬಗ್ಗೆ ಕುಲಂಕುಷವಾಗಿ ತನಿಖೆ ನಡಿಬೇಕು ಅಂತ ಹಿಂದೂ ಸಮುದಾಯದವ್ರು ಆಗ್ರಹಿಸಿದ್ದಾರೆ. ಇನ್ನು 2021ರಲ್ಲಿ ದುರ್ಗಾ ಪೂಜೆ ಸಮಯದಲ್ಲಿ ಹಿಂದೂ ಮಂಟಪ ಹಾಗೂ ದೇವಾಲಯಗಳ ಮೇಲೆ ಬಾಂಗ್ಲಾದೇಶದಾದ್ಯಂತ ದಾಳಿ ನಡೆಸಲಾಗಿತ್ತು. ಆ ಹಿಂಸಾಚಾರದಲ್ಲಿ ಅನೇಕರು ಮೃತಪಟ್ಟಿದ್ರು. ಇನ್ನು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮೂರು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ದೇವಾಲಯಗಳ ಗೋಡೆಗಳ ಮೇಲೆ ಹಿಂದೂ ವಿರೋಧಿ ಬರಹಗಳನ್ನ ಬರೆದು ಖಲಿಸ್ತಾನಿ ಪರ ಗುಂಪುಗಳು ದೇವಾಲಯಗಳನ್ನ ವಿರೂಪಗೊಳಿಸಿದ್ರು. ಅಷ್ಟೇ ಅಲ್ದೇ ಹಿಂದೂಗಳ ಮೇಲೆ ಹಲ್ಲೆ ಕೂಡ ಮಾಡಿದ್ರು. ಅತ್ತ ಕೆನಡದಲ್ಲೂ ಕೂಡ ಹಿಂದೂ ದೇವಾಲಯಗಳ ಮೇಲೆ ಆವಾಗಾವಾಗ ದಾಳಿ ಆಗ್ತಿರುತ್ತೆ.

-masthmagaa.com

Contact Us for Advertisement

Leave a Reply