10 ನಿಮಿಷದಲ್ಲಿ ಅಪಘಾತಕ್ಕೀಡಾದ 50 ವಾಹನಗಳು! 16 ಸಾವು!

masthmagaa.com:

ಸರಣಿ ರಸ್ತೆ ಅಪಘಾತದಲ್ಲಿ 16 ಜನ ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ಚೀನಾದ ಹೈವೇಯಲ್ಲಿ ಸಂಭವಿಸಿದೆ. ಅಲ್ಲಿನ ಹುನಾನ್‌ ಪ್ರಾಂತ್ಯದ ಹೈವೇಯಲ್ಲಿ ಘಟನೆ ಸಂಭವಿಸಿದೆ. 10 ನಿಮಿಷದಲ್ಲಿ ಡೆಲಿವರಿ ಟ್ರಕ್‌ಗಳು, ಕಾರ್‌ಗಳು ಸೇರಿದಂತೆ ಸುಮಾರು 50 ವಾಹನಗಳು ಅಪಘಾತಕ್ಕೀಡಾಗಿವೆ ಅಂತ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವ್ರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply