ಗೋಧಿ ಬೆಲೆ ಕಡಿಮೆ ಮಾಡೋಕೆ ಕೇಂದ್ರ ಸರ್ಕಾರ ಮಾಡಿದ್ದೇನೆ? ಇಲ್ಲಿದೆ ಮಾಹಿತಿ!

masthmagaa.com:

ಓಪನ್‌ ಮಾರ್ಕೆಟ್‌ನಲ್ಲಿ ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆ ಗಗನಕ್ಕೇರ್ತಿರೋದನ್ನ ತಡೆಯೋಕೆ ಕೇಂದ್ರ ಸರ್ಕಾರ ಕೆಲವು ಕ್ರಮ ಕೈಗೊಳ್ತಿದೆ.ಇದರ ಭಾಗವಾಗಿ ಮುಂದಿನ ವಾರ ಸುಮಾರು 16 ಲಕ್ಷ ಟನ್‌ ಗೋಧಿಯನ್ನ ನಿರ್ಧಿಷ್ಟ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡೋಕೆ ಸರ್ಕಾರ ನಿರ್ಧಾರ ಮಾಡಿದೆ. NAFED ಮತ್ತು ಕೇಂದ್ರೀಯ ಭಂಡಾರದಂತ ಸಂಸ್ಥೆಗಳಿಗೆ ಕೂಡ ಗೋಧಿಯನ್ನ ಕಡಿಮೆ ಬೆಲೆಗೆ ನೀಡಿ, ಈಗಿರೋ ಗರಿಷ್ಠ ಮಾರಾಟ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಗೋಧಿ ಹಿಟ್ಟು ಮಾರಾಟ ಮಾಡೋಕೆ ಸೂಚಿಸಲಾಗುತ್ತೆ ಅಂತ ಸರ್ಕಾರ ತಿಳಿಸಿದೆ.

-masthmagaa.com

Contact Us for Advertisement

Leave a Reply