ಗುಜರಾತ್: ಮೊದಲ ದೇಶೀಯ ಪರಮಾಣು ಶಕ್ತಿ ರಿಯಾಕ್ಟರ್‌ ಕಾರ್ಯಾರಂಭ

masthmagaa.com:

ಗುಜರಾತಿನ ಕಕ್ರಾಪರ್ ಅಣು ವಿದ್ಯುತ್ ಯೋಜನೆಯಡಿ (KAPP) ದೇಶದ ಮೊದಲ ದೇಶೀಯ 700 ಮೆಗಾವ್ಯಾಟ್ ವಿದ್ಯುತ್ ನ್ಯೂಕ್ಲಿಯರ್‌ ಪವರ್‌ ಪ್ಲಾಂಟ್‌ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಗುಜರಾತಿನಲ್ಲಿ 700 MWe ಸಾಮರ್ಥ್ಯದ ಅತಿ ದೊಡ್ಡ ಸ್ವದೇಶಿ ಕಕ್ರಪಾರ್ ಪರಮಾಣು ವಿದ್ಯುತ್ ಸ್ಥಾವರ ಘಟಕ-3 ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply