ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಲಂಕಾ! ವಿಪರ್ಯಾಸ ಏನ್‌ ಗೊತ್ತಾ?

masthmagaa.com:

ಕ್ರಿಕೆಟ್‌ ಇತಿಹಾಸದಲ್ಲೇ ಮೊದಲ ಬಾರಿಗೆ ವಿಸ್ಮಯದ ಸಂಗತಿಗೆ ದೆಹಲಿಯಲ್ಲಿ ನಡಿತಿರುವ ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಪಂದ್ಯ ಸಾಕ್ಷಿಯಾಗಿದೆ. ಶ್ರೀಲಂಕಾದ ಬ್ಯಾಟರ್‌ ಎಂಜೆಲೋ ಮ್ಯಾಥ್ಯೂಸ್‌ ಅವ್ರು ಒಂದೇ ಒಂದು ಎಸೆತ ಎದುರಿಸದೆ ಔಟಾಗಿದ್ದಾರೆ. ಓರ್ವ ಬ್ಯಾಟರ್‌ ಔಟಾದ ಬಳಿಕ ಹೊಸ ಬ್ಯಾಟರ್‌ ಕ್ರೀಸ್‌ಗೆ ಬರೋಕೆ 2 ನಿಮಿಷ ಟೈಮಿರುತ್ತೆ. ಆದ್ರೆ ಮ್ಯಾಥ್ಯೂಸ್ ತಡವಾಗಿ ಮೈದಾನಕ್ಕೆ ಬಂದಿದ್ದು, ಫೀಲ್ಡಿಂಗ್‌ ಕ್ಯಾಪ್ಟನ್‌ ಶಕೀಬ್‌ ಅಲ್‌ ಹಸನ್‌ ಔಟ್‌ಗೆ ಮನವಿ ಮಾಡಿದ್ದಾರೆ. ಆಗ ಅಂಪೈರ್‌ ಟೈಮ್‌ಔಟ್‌ ಅನೌನ್ಸ್‌ ಮಾಡಿದ್ದಾರೆ. ಈ ವೇಳೆ ಮ್ಯಾಥ್ಯೂ ಅಂಪೈರ್‌ಗಳನ್ನು ಓಲೈಸುವ ಪ್ರಯತ್ನ ಮಾಡಿದ್ದು, ಹೆಲ್ಮೆಟ್ ನಲ್ಲಿ ಸಮಸ್ಯೆ ಇದ್ದ ಕಾರಣ ಲೇಟ್‌ ಆಯ್ತು ಅಂತ ಹೇಳಿದ್ರೂ ಅಂಪೈರ್ ಅದನ್ನ ಕೇಳದೆ ಔಟ್‌ ಮಾಡಿದ್ದಾರೆ. ಶಕೀಬ್‌ ಅಲ್‌ ಹಸನ್‌ ಅವ್ರು ಟೈಂ ಔಟ್‌ಗೆ ಮನವಿ ಮಾಡಿದ್ರಿಂದ ಅನಿವಾರ್ಯವಾಗಿ ಅಂಪೈರ್‌ಗಳು ರೂಲ್ಸ್‌ ಪ್ರಕಾರ ನಡೆದುಕೊಳ್ಳಬೇಕಾಗಿದೆ. ಒಂದ್ವೇಳೆ ಶಕೀಬ್‌ ತಮ್ಮ ಮನವಿಯನ್ನ ವಾಪಸ್‌ ತೆಗೆದುಕೊಂಡಿದ್ರೆ ಮ್ಯಾಥ್ಯೂಸ್‌ ಆಡಬಹುದಿತ್ತು. ಆದ್ರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಬಾಂಗ್ಲಾ ಮತ್ತು ಲಂಕಾ ತಂಡಗಳ ನಡುವೆ ಒಂದು ರೀತಿಯ ವೈಷಮ್ಯ ಸೃಷ್ಟಿಯಾಗಿದೆ. ಬಹುಶಃ ಈ ಹಿನ್ನಲೆಯಲ್ಲೇ ಬಾಂಗ್ಲಾ ಮನವಿಯನ್ನ ವಾಪಸ್‌ ತೆಗೆದುಕೊಂಡಿಲ್ಲ.. ಅಂದ್ಹಾಗೆ ಈ ರೀತಿ ಟೈಮ್‌ಔಟ್‌ ಆಗಿರೋದು ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply