ಅಮೆರಿಕದ ಮತ್ತೊಂದು ಹೆಲಿಕಾಪ್ಟರ್‌ ಪತನ, ಇಬ್ಬರು ಸಿಬ್ಬಂದಿ ಸಾವು!

masthmagaa.com:

ಇತ್ತೀಚೆಗೆ ಅಮೆರಿಕದ ಹೆಲಿಕಾಪ್ಟರ್‌ಗಳು ಅಪಾಘತಕ್ಕೀಡಾಗೊ ಘಟನೆಗಳು ಜಾಸ್ತಿಯಾಗ್ತಿವೆ. ಇದೀಗ ವೈದ್ಯಕೀಯ ಹೆಲಿಕಾಪ್ಟರ್‌ ಒಂದು ಅಪಘಾತಕ್ಕೀಡಾಗಿದ್ದು, ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಲ್ಲಿನ ಅಲಬಾಮಾದಲ್ಲಿ ಹೈಕ್‌ ಮಾಡ್ತಿದ್ದ ವ್ಯಕ್ತಿಯೊಬ್ಬರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು. ಅವ್ರಿಗೆ ಹೆಲ್ಪ್‌ ಮಾಡೋಕೆ ಹೋದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತ ನಡೆದ ಸಮಯದಲ್ಲಿ ಕೇವಲ ಮೂವರು ಸಿಬ್ಬಂದಿ ಹೆಲಿಕಾಪ್ಟರ್‌ನಲ್ಲಿದ್ರು. ಅದ್ರಲ್ಲಿ ಇಬ್ಬರ ಸಾವು ಖಚಿತವಾಗಿದೆ. ಮೂರನೇ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕದ 2 ಸೇನಾ ಹೆಲಿಕಾಪ್ಟರ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಅಪಘಾತ ಉಂಟಾಗಿತ್ತು. ಆಗ ಎರಡು ಹೆಲಿಕಾಪ್ಟರ್‌ನಲಿದ್ದ ಎಲ್ಲ 9 ಸಿಬ್ಬಂದಿ ಮೃತಪಟ್ಟಿದ್ರು.

-masthmagaa.com

Contact Us for Advertisement

Leave a Reply