ಅಮೆರಿಕದ ಅಲಾಬದಲ್ಲಿ ಸೇನಾ ಹೆಲಿಕಾಪ್ಟರ್‌ ಪತನ, ಇಬ್ಬರ ಸಾವು!

masthmagaa.com:

ಮಿಲಿಟರಿ ಬ್ಲಾಕ್‌ ಹಾಕ್‌ ಹೆಲಿಕಾಪ್ಟರ್‌ ಒಂದು ಪತನಗೊಂಡು ಇಬ್ಬರು ಮೃತಪಟ್ಟಿರೊ ಘಟನೆ ಅಮೆರಿಕದ ಅಲಬಾಮದಲ್ಲಿ ನಡೆದಿದೆ. ಈ ಹೆಲಿಕಾಪ್ಟರ್‌ ಟೆನ್ನೆಸ್ಸೀಯ ನ್ಯಾಷನಲ್‌ ಗಾರ್ಡ್‌ಗೆ ಸೇರಿದ್ದು, ಟ್ರೈನಿಂಗ್‌ ನೀಡ್ತಿದ್ದ ವೇಳೆ ಪತನಗೊಂಡಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ನ್ಯಾಷನಲ್‌ ಗಾರ್ಡ್‌ ಇದು ಅಲ್ಲಿನ ರಾಜ್ಯ ಆಧಾರಿತ ಮಿಲಿಟರಿ ಪಡೆಯಾಗಿದ್ದು, ಅಮೆರಿಕದ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತೆ. ಇನ್ನು ಘಟನೆಯಲ್ಲಿ ಇತರ ಸಿಬ್ಬಂದಿ ಹಾಗೂ ನಾಗರಿಕರಿಗೆ ಯಾವುದೇ ಹಾನಿಯಾಗಿಲ್ಲ ಅಂತ ಸೇನೆ ತಿಳಿಸಿದೆ.

-masthmagaa.com

Contact Us for Advertisement

Leave a Reply