ಕಾಶ್ಮೀರ ಪಂಡಿತನನ್ನ ಹತ್ಯೆ ಮಾಡಿದ ಲಷ್ಕರ್‌ ಉಗ್ರವಾದಿಗಳ ಎನ್ಕೌಂಟರ್‌!

masthmagaa.com:

ಜಮ್ಮು-ಕಾಶ್ಮೀರ್‌ನ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಕಾಶ್ಮೀರಿ ಪಂಡಿತರೊಬ್ಬರ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರವಾದಿಗಳನ್ನ ಎನ್ಕೌಂಟರ್‌ ಮಾಡಿದ್ದಾರೆ. ಪೊಲೀಸರ ಪ್ರಕಾರ ಈ ಉಗ್ರವಾದಿಗಳು ಕಾಶ್ಮೀರದಲ್ಲಿ ಬ್ಯಾಂಕ್‌ ಸೆಕ್ಯುರಿಟಿ ಗಾರ್ಡ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಶ್ಮೀರದ ಪಂಡಿತ ಸಂಜಯ್‌ ಶರ್ಮಾ ಅವರ ಹತ್ಯೆಯಲ್ಲಿ ತೊಡಗಿದ್ದರು. ಇವರನ್ನು ಅಲ್ಲಿನ ಸ್ಥಳೀಯ ಮಾರ್ಕೆಟ್‌ಗೆ ತೆರಳುವಾಗ ಗುಂಡು ಹಾರಿಸಿ ಹಲ್ಲೆ ಮಾಡಲಾಗಿತ್ತು. ಇದೀಗ ಇಬ್ಬರು ಉಗ್ರವಾದಿಗಳು ಪೊಲೀಸರ ಎನ್ಕೌಂಟರ್‌ಗೆ ಬಲಿಯಾಗಿದ್ದು, ಇವರನ್ನು ಮೊರಿಫತ್‌ ಮಖ್ಬೂಲ್‌ ಮತ್ತು ಜಜೀ಼ಮ್‌ ಫರೂಖ್‌ ಎಂದು ಗುರುತಿಸಲಾಗಿದೆ.

-masthmagaa.com

Contact Us for Advertisement

Leave a Reply