ಗಗನ ನೀ: ತಾಯಿ ಕಣ್ಣಲ್ಲಿ ರಾಕಿ ಹೀಗಿರುತ್ತಾನೆ!

masthmagaa.com:

ಮೈಸೂರಿನಲ್ಲಿ ಹುಟ್ಟಿದ ರಾಜ ಕೃಷ್ಣಪ್ಪ ಬೈರ್ಯ ಅಲಿಯಾಸ್ ರಾಕಿಗೆ ಬೇಕಾಗಿರೋದು ದುನಿಯಾ. ಸೋ, ಮುಂಬೈನಲ್ಲಿದ್ದ ರಾಕಿ ನರಾಚಿಗೆ ಹೋಗೋದಕ್ಕೂ, ಗರುಡನನ್ನ ಕೊಲ್ಲೋದಕ್ಕು, ನರಾಚಿಯ ಅಧಿಪತಿ ಆಗೋದಕ್ಕು, ಮುಂದೆ ದುನಿಯಾವನ್ನ ಪಡೆದುಕೊಳ್ಳೋಕೆ ಹೊರಡೋದಕ್ಕೂ ಆತ ತನ್ನ ತಾಯಿಗೆ ಕೊಟ್ಟ ಮಾತೆ ಮೂಲ ಕಾರಣ. ಇನ್ನು ನಾವೆಲ್ಲ ಇಷ್ಟಪಡುವ ರಾಕಿಯ ಗಡಸುತನ, ಮೊಂಡುತನ, ಕೋಪ ಒಟ್ಟಾರೆ ಓವರ್ ಆಲ್ ಆತನ ಆ್ಯಟಿಟ್ಯೂಡ್ ರೂಪುಗೊಂಡಿರೋದೆ ತನ್ನ ತಾಯಿಗೆ ಕೊಟ್ಟಿರುವ ಮಾತನ್ನ ಉಳಿಸಿಕೊಳ್ಳಬೇಕು ಅನ್ನೋ ಬಲವಾದ ಹಠದಿಂದ. ಅದಕ್ಕೆ ಆಯ್ಕೆ ಮಾಡಿಕೊಂಡಿರುವ ದಾರಿ ಸರಿನೋ ತಪ್ಪೋ ಅದು ರಾಕಿಗೇ ಅವಶ್ಯಕತೆ ಇಲ್ಲ ಗುರಿ ತಲೂಪೋದಷ್ಟೆ ಅವನ ಲಕ್ಷ್ಯ, ಟಾರ್ಗೆಟ್ ಎಲ್ಲ.

ಸೋ, KGF basically an emotional saga between Rocky and his lost mother. ಈ ಕಾರಣಕ್ಕೇನೆ ಒಂದು ನಾರ್ಮಲ್ ರಿವೆಂಜ್ ಡ್ರಾಮಾ ಅಥವಾ ಪಟ್ಟಕ್ಕೆ ಆಸೆ ಪಡುವ ಕಥೆಯನ್ನ ಒಳಗೊಂಡ ಬಹುತೇಕ ಸಿನಿಮಾಗಳಿಗಿಂತ ಈ ಸಿನಿಮಾ ಭಿನ್ನವಾಗಿ ನಿಲ್ಲತ್ತೆ, ನಮ್ಮನ್ನ ಅಷ್ಟೊಂದು ಎಮೋಷನಲ್ ಆಗಿ ಇನ್ವೆಸ್ಟ್ ಮಾಡಿಸತ್ತೆ.
ಇನ್ನು ಇವತ್ತು ಬಿಡುಗಡೆ ಆಗಿರುವ ಗಗನ ನೀ ಹಾಡಿನ ಬಗ್ಗೆ ಹೇಳೋದಾದ್ರೆ ಕೆಜಿಎಫ್ ಭಾಗ ಒಂದರಲ್ಲಿ ಕೂಡ ಒಂದು ಮದರ್ ಸೆಂಟಿಮೆಂಟ್ ಹಾಡಿತ್ತು ಗರ್ಬಧಿ ನನ್ನಿರಿಸಿ ಊರಲಿ ನಡೆಯುತಿರೆ ತೇರಲೀ ಕುಳಿತಂತೆ ಆಮ್ಮ ಅಂತ ಶುರು ಆಗುವ ಆ ಹಾಡಿನಲ್ಲಿ ತನ್ನ ಅಮ್ಮನನ್ನ ನೆನೆಸಿಕೊಂಡು ಮರುಗುವ ಮಗು ಆಕೆ ಪಟ್ಟ ಕಷ್ಟವನ್ನು ನೆನೆಸಿಕೊಳ್ಳುವ ಹಾಡು ಅದಾಗಿತ್ತು. ಆದರೆ ಗಗನ ನೀ ಹಾಡಿನಲ್ಲಿ ತನ್ನ ಮಗ ಇತಿಹಾಸವನ್ನೇ ಬರೀತಾನೇ ಅಂತ ನಂಬಿರುವ ತಾಯಿ ಮಗನ ಮೇಲೆ ಇಟ್ಟಿರುವ ನಂಬಿಕೆಯ ದ್ಯೋತಕದಂತೆ ಈ ಹಾಡು ಮೂಡಿಬಂದಿದೆ, ಮತ್ತೆ ಮನಮುತ್ತತ್ತೆ.
ಒಂದು ಸಲ ಕ್ರಿಯೇಟ್ ಮಾಡಿರೋ ಮ್ಯಾಜಿಕ್ ಅನ್ನೇ ಮತ್ತೊಮ್ಮೆ ಅದೇ ಸ್ಕೇಲ್ ನಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ರೀ ಕ್ರಿಯೇಟ್ ಮಾಡೋದು ಅಷ್ಟು ಸುಲಭ ಅಲ್ಲ ಅದನ್ನ ಮಾಡಿರೋ ಕೆಜಿಎಫ್ ಟೀಮ್ ಗೆ ಒಂದು ಹ್ಯಾಟ್ಸ್ ಆಫ್.
ಇನ್ನು ಗರ್ಭದಿ ನನ್ನಿರಿಸಿ ಹಾಡನ್ನ ಬರೆದಿದ್ದ ಕಿನ್ನಲ್ ರಾಜ್ ಅವರೇ ಈ ಹಾಡನ್ನ ಬರೆದಿದ್ದಾರೆ. ಗರ್ಭದಿ ನನ್ನಿರಿಸಿ ಹಾಡನ್ನ ಕಿನ್ನಾಲ್ ರಾಜ್ ಮತ್ತು ರವಿ ಬಸ್ರೂರು ಒಟ್ಟಿಗೆ ಬರೆದಿದ್ದರು. ಈ ಹಾಡನ್ನ ಕಿನ್ನಾಲ್ ರಾಜ್ ಬಹಳ ಅದ್ಭುತವಾಗಿ ಬರೆದಿದ್ದಾರೆ. ಸುಚೇತಾ ಬಸ್ರೂರು ಅವರು ಬಹಳ ಅದ್ಭುತವಾಗಿ ಹಾಡಿದ್ದಾರೆ.
ಇನ್ನು ಮಾಸ್ ಗೆ ಮಾಸ್ ಕ್ಲಾಸ್ ಗೆ ಕ್ಲಾಸ್ ಸಂಗೀತ ಕೊಡುವ ಕ್ಯಪೇಸಿಟಿ ಇರುವ ರವಿ ಬಸ್ರೂರು ಅವರು ಮೆಲೋಡಿ ಜಾನೆರ್ ನಲ್ಲು ಕೂಡ ಆವರು ಕಿಂಗ್ ಅನ್ನೋದನ್ನ ಈ ಹಾಡು ಮತ್ತೊಮ್ಮೆ ಪ್ರೋವ್ ಮಾಡಿದೆ. ಹಾಡಿನ ಕೊನೆಯಲ್ಲಿ ಬರುವ ತಂದಾನಿ ತಾನೋ ಬಿಟ್ ಹೃದಯವನ್ನು ತಟ್ಟುತ್ತದೆ ಅಂದ್ರೆ ತಪ್ಪಾಗಲ್ಲ.
ಗಗನ ನೀ, ಭುವನ ನೀ, ಶಿಕರ ನೀ, ಧಣಿದರೆ ಧರಣಿಗೆ ಧನಿಯು ನೀ, ಪಣವಿದು ನಾಳೆಯ ಚರಿತೆ ನೀ ಈ ಸಾಲುಗಳು ಬಹಳ ಅದ್ಭುತವಾಗಿವೆ. ತಾಯಿ ಮಗನ ಸಂಘರ್ಷದ ಕಥೆಯನ್ನ ಕೆಲವೇ ಕೆಲವು ಸಾಲುಗಳಲ್ಲಿ ಪರಿಚಯ ಮಾಡಿಕೊಡುವ ಥರ ಈ ಸಾಲುಗಳು ಇವೆ. ಮನಮುಟ್ಟುವಂತೆ ಕೂಡ ಇವೆ.
-masthmagaa.com
Contact Us for Advertisement

Leave a Reply