ಜೈಲಿನಲ್ಲಿರೊ ಇಮ್ರಾನ್‌ಗೆ 2‌ ವಾರಗಳ ಬ್ಯಾನ್ ಹೇರಿ ಪಾಕಿಸ್ತಾನ!

masthmagaa.com:

ನೂರಾರು ಕೇಸ್‌ಗಳಿಂದ ಜೈಲಿನಲ್ಲಿರೊ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇಮ್ರಾನ್‌ ಖಾನ್‌ಗೆ ಎರಡು ವಾರಗಳ ಕಾಲ ಯಾವುದೇ ಪಬ್ಲಿಕ್‌ ವಿಸಿಟ್‌, ಮೀಟಿಂಗ್‌ ಹಾಗೂ ಇಂಟರ್‌ವ್ಯೂಹ್‌ಗಳನ್ನ ಕೊಡ್ಬಾರ್ದು ಅಂತ ಬ್ಯಾನ್‌ ಹೇರಲಾಗಿದೆ. ಮಂಗಳವಾರದಿಂದ ಈ ನಿಯಮ ಅನ್ವಯವಾಗಲಿದ್ದು, ರಾವಲ್ಪಿಂಡಿ ಜೈಲಿನ ಅಧಿಕಾರಿಗಳು ಈ ಬ್ಯಾನ್‌ ಹೇರಿದ್ದಾರೆ ಅಂತ ಗೊತ್ತಾಗಿದೆ. ಅಂದ್ಹಾಗೆ ಇಮ್ರಾನ್‌ ಖಾನ್ ಬೆಂಬಲಿಗರು ಪಾಕ್‌ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತೇಳಿ ಪಂಜಾಬ್‌ನಲ್ಲಿ ಮತ್ತೆ ತೀವ್ರ ಪ್ರತಿಭಟನೆ ನಡೆಸಲು ಶುರು ಮಾಡಿದ್ರು. ಈ ವೇಳೆ ಹಲವರು ಅರೆಸ್ಟ್‌ ಕೂಡ ಆಗಿದ್ರು. ಇದೇ ಟೈಮಲ್ಲಿ ಪಂಜಾಬ್‌ನ ಗೃಹ ಇಲಾಖೆ, ಜೈಲು ಅಧಿಕಾರಿಗಳಿಗೆ ಪತ್ರ ಬರೆದು ಇಮ್ರಾನ್‌ಗೆ ಬ್ಯಾನ್‌ ಹೇರಿ ಅಂತ ಮನವಿ ಮಾಡ್ಕೊಂಡಿತ್ತು. ಅಲ್ದೇ ಪಾಕ್‌ ಚುನಾವಣೆ ನಡೆದಾಗಿನಿಂದ ಇಮ್ರಾನ್‌ ಖಾನ್ ಹಾಗೂ ಅವ್ರ ಬೆಂಬಲಿಗರ ಮಧ್ಯೆ ಜೈಲಿನಲ್ಲೇ ಹಲವು ಮೀಟಿಂಗ್‌ಗಳು ನಡೆದಿದ್ವು. ಹೀಗಾಗಿ ಸದ್ಯದ ಪ್ರತಿಭಟನೆಯನ್ನ ಹತ್ತಿಕ್ಕಲು ಜೈಲು ಅಧಿಕಾರಿಗಳು ಇಮ್ರಾನ್‌ ಭೇಟಿಗೆ ನಿರ್ಬಂಧ ಹೇರಿದ್ದಾರೆ.

-masthmagaa.com

Contact Us for Advertisement

Leave a Reply