2 ವಾರ ಪೂರೈಸಿದ ಶಕ್ತಿ ಯೋಜನೆ! 4 ಸಾವಿರ ಹೊಸ ಬಸ್​ ಖರೀದಿಗೆ ಚಿಂತನೆ!

masthmagaa.com:

ಮಹಿಳೆಯರಿಗೆ ಉಚಿತ ಬಸ್‌ ಸೇವೆ ಒದಗಿಸುವ ಕಾಂಗ್ರೆಸ್‌ನ ಶಕ್ತಿ ಯೋಜನೆ ಆರಂಭವಾದಾಗಿನಿಂದ ಸಿಕ್ಕಾಪಟ್ಟೆ ಸ್ಪಂದನೆ ವ್ಯಕ್ತವಾಗ್ತಿದೆ. 2 ವಾರ ಪೂರ್ಣಗೊಳಿಸಿರೊ ಶಕ್ತಿ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ
ಒಟ್ಟು 166 ಕೋಟಿ ಮೌಲ್ಯವನ್ನ ದಾಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಏರಿಕೆಯಾಗ್ತಾನೇ ಇದೆ. ಬಸ್‌ಗಳಿಗಾಗಿ ಹೆಣ್ಮಕ್ಕಳು ಮುಗಿಬಿದ್ದಿದ್ದಾರೆ. ಸೀಟಿಗಾಗಿ ಜಗಳಗಳಾಗುತ್ತಿವೆ. ರಾಜ್ಯದಲ್ಲಿರುವ ‌ಸಾರಿಗೆ ನಿಗಮದ ಬಸ್ಸುಗಳು ಸಾಲುತ್ತಿಲ್ಲ. ಹೀಗಾಗಿ ನಾಲ್ಕೂ ಸಾರಿಗೆ ನಿಗಮಕ್ಕೆ 4 ಸಾವಿರ ಹೊಸ ಬಸ್​ ಖರೀದಿಗೆ ಚಿಂತನೆ ನಡೆದಿದೆ. KSRTCಯಲ್ಲಿ 8116, BMTCಯಲ್ಲಿ 6688, ವಾಯುವ್ಯ ಸಾರಿಗೆಯಲ್ಲಿ 4858 ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 4327 ಬಸ್‌ಗಳಿವೆ. ಅಂದ್ರೆ ಒಟ್ಟು ನಾಲ್ಕು ಸಾರಿಗೆ ನಿಗಮದಿಂದ 23,986 ಬಸ್ಸುಗಳಿವೆ. ಆದರೆ ರಾಜ್ಯದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಇಷ್ಟು ಬಸ್ಸುಗಳು ಸಾಲಲ್ಲ. ಅಲ್ದೇ ನಾಲ್ಕು ನಿಗಮಗಳಲ್ಲಿ ಸುಮಾರು 3 ರಿಂದ 4 ಸಾವಿರ ಹಳೆಯ ಬಸ್ಸುಗಳಿದ್ದು ಅವುಗಳನ್ನು ಗುಜರಿಗೆ ಹಾಕಿ ಮತ್ತೆ ಹೊಸದಾಗಿ 4 ಸಾವಿರ ಬಸ್ಸುಗಳನ್ನು ಸೇರಿಸಲು ತಯಾರಿ ನಡೆದಿದೆ.

-masthmagaa.com

Contact Us for Advertisement

Leave a Reply