200 ಯುನಿಟ್‌ ಉಚಿತ ಕರೆಂಟ್‌ ಗ್ಯಾರಂಟಿಯಿಂದ ಬೆಸ್ಕಾಂ ಅಧಿಕಾರಿಗಳಿಗೆ ತಲೆಬಿಸಿ! ಯಾಕೆ?

masthmagaa.com:

ಕಾಂಗ್ರೆಸ್‌ನ 200 ಯುನಿಟ್‌ ಉಚಿತ ವಿದ್ಯುತ್ ಗ್ಯಾರಂಟಿ ಬೆಸ್ಕಾಂ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್‌ ಚುನಾವಣೆಯಲ್ಲಿ ಗೆದ್ದ ನಂತರದಿಂದ ಅನೇಕರು ಕರೆಂಟ್‌ ಬಿಲ್‌ ಕಟ್ಟಲ್ಲ, ಕಾಂಗ್ರೆಸ್‌ ನಾಯಕರನ್ನ ಕೇಳಿ ಅಂತ ವರಸೆ ತಗೆದಿದ್ದಾರೆ. ಇದ್ರಿಂದ ಕಂಗೆಟ್ಟಿರೋ ಬೆಸ್ಕಾಂ ಅಧಿಕಾರಿಗಳು ಸೂಚನೆಯೊಂದನ್ನ ಹೊರಡಿಸಿದ್ದಾರೆ. ನಮಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಗ್ರಾಹಕರು ತಪ್ಪದೇ ವಿದ್ಯುತ್‌ ಬಿಲ್ಲನ್ನ ಕಡ್ಡಾಯವಾಗಿ ಕಟ್ಟಬೇಕು. ಒಂದ್‌ ವೇಳೆ ಸರ್ಕಾರದಿಂದ ನೂತನ ಆದೇಶ ಬಂದ್ರೂ, ಬಾಕಿ ಇರುವ ವಿದ್ಯುತ್‌ ಬಿಲ್‌ಗೆ ಅನ್ವಯಿಸಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply