ಮಯನ್ಮಾರ್‌ ಗಣಿ ದುರಂತದಲ್ಲಿ 25 ಮಂದಿ ಸಾವು!

masthmagaa.com:

ಗಣಿಗಾರಿಕೆ ವೇಳೆ ಭೂಕುಸಿತ ಉಂಟಾಗಿ ದುರಂತದಲ್ಲಿ ಕನಿಷ್ಟ 25 ಮಂದಿ ಮೃತಪಟ್ಟಿರುವ ಘಟನೆ ಮಯನ್ಮಾರ್‌ನಲ್ಲಿ ನಡೆದಿದೆ. ಇತ್ತೀಚಿಗೆ ಮಯನ್ಮಾರ್‌ನಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಮಣ್ಣು ಸಡಿಲಗೊಂಡು ಹಲವೆಡೆ ಭೂಕುಸಿತ ಉಂಟಾಗಿದೆ. ಉತ್ತರ ಕಚಿನ್ಸ್ ಪ್ರಾಂತದ ಗಣಿಯೊಂದರ ಆಳದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಸುಮಾರು 180 ಮೀಟರ್ ಎತ್ತರದ ಗೋಡೆ ಕುಸಿದುಬಿದ್ದಿದೆ. ಘಟನೆಯಲ್ಲಿ ಹಲವು ಕಾರ್ಮಿಕರು ಮಣ್ಣಿನ ರಾಶಿಯಡಿ ಸಿಲುಕಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ 25 ಮೃತದೇಹ ಪತ್ತೆಹಚ್ಚಲಾಗಿದೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply