ಜಮ್ಮು & ಕಾಶ್ಮೀರದಲ್ಲಿ ಮೂರು ಮೋಸ್ಟ್‌ ವಾಂಟೆಡ್‌ ಉಗ್ರರ ಬೇಟೆ!

masthmagaa.com:

ಜಮ್ಮುಕಾಶ್ಮೀರದಲ್ಲಿ ಉಗ್ರರ ವಿರುದ್ದ ಕಾರ್ಯಾಚರಣೆ ಮುಂದುವರೆದಿದೆ. ಈಗ
ಬುಧವಾರ ರಾತ್ರಿ ಮತ್ತೆ ಮೂವರು ಉಗ್ರರನ್ನ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಈ ಆಪರೇಶನ್ ನಡೆದಿದೆ. ಹತ್ಯೆಗೊಂಡ ಉಗ್ರರು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮೋಸ್ಟ್‌ ವಾಂಟೆಡ್‌ ಉಗ್ರರು ಮತ್ತು LeT ಉಗ್ರ ಸಂಘಟನೆಯ ಕಮಾಂಡರ್‌ ಆಗಿದ್ರು ಎನ್ನಲಾಗಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌, ವಿ ಕೆ ಬಿರ್ದಿ, ʻಇದೊಂಥರ ನಮಗೆ ದೊಡ್ಡ ಸಾಧನೆಯಾಗಿದೆ. ಯಾಕಂದ್ರೆ ಈ ಉಗ್ರರು, ಇಲ್ಲಿನ ಭದ್ರತಾ ಸಿಬ್ಬಂದಿ, ನಾಗರಿಕರು ಮತ್ತು ಅಲ್ಪಸಂಖ್ಯಾತರು ಸೇರಿ ಒಟ್ಟು 18 ಹತ್ಯೆಗಳಲ್ಲಿ ಇನ್ವಾಲ್ವ್‌ ಆಗಿದ್ರುʼ ಅಂತೇಳಿದ್ದಾರೆ. ಈ ಮೂಲಕ ಕಳೆದ ಒಂದು ವಾರದಿಂದ ಅಲ್ಲಿ ನಿರಂತರವಾಗಿ ಉಗ್ರರ ದಮನ ಮಾಡೋ ಕಾರ್ಯಾ ಮಾಡಲಾಗಿದೆ. ಯಾಕಂದ್ರೆ ಮೇ7ರಂದು ಕೂಡ ಇದೇ ಥರ TRF ಸಂಘಟನೆಯ ಮೋಸ್ಟ್‌ ವಾಂಟೆಡ್‌ ಉಗ್ರರನ್ನ ಹತ್ಯೆ ಮಾಡಲಾಗಿತ್ತು. ಕಾಶ್ಮೀರದಲ್ಲಿ ವಾಯುಪಡೆ ಬೆಂಗಾವಲು ಮೇಲೆ ದಾಳಿ ನಡೆದ ಸೇನೆಯಿಂದ ಈ ಆಪರೇಶನ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply