ಮಧ್ಯಪ್ರದೇಶ ವಿಧಾನಸಭೆ ಚುನಾವಣೆ: 300 ಯುನಿಟ್‌ ಫ್ರೀ ವಿದ್ಯುತ್‌ ಗ್ಯಾರಂಟಿ ನೀಡಿದ ಆಪ್‌

masthmagaa.com:

ದೇಶದಲ್ಲಿ ರಾಜಕೀಯ ಪಕ್ಷಗಳು ಫ್ರೀಬೀ ಭರವಸೆ ನೀಡೋದನ್ನ ಮುಂದುವರೆಸಿವೆ. ಇದೀಗ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಪ್‌ ಗೆಲುವು ಸಾಧಿಸಿದರೆ 300 ಯುನಿಟ್​ ವಿದ್ಯುತ್ ಉಚಿತ ನೀಡೋದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಇದೇ ವೇಳೆ ಮಧ್ಯಪ್ರದೇಶದ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ ರೂಪಾಯಿಗಳ ಜೊತೆಗೆ ಉಚಿತ ವಿದ್ಯುತ್, ವೈದ್ಯಕೀಯ ಚಿಕಿತ್ಸೆ ಮತ್ತು ಗುಣಮಟ್ಟದ ಶಾಲೆಗಳ ನಿರ್ಮಾಣ ಸೇರಿದಂತೆ ವಿವಿಧ ಗ್ಯಾರಂಟಿಗಳನ್ನ ನೀಡಿದ್ದಾರೆ. ಅಷ್ಟೆ ಅಲ್ದೆ ಅಪ್‌ ಅಧಿಕಾರಕ್ಕೆ ಬಂದರೆ ನವೆಂಬರ್ 30ರವರೆಗೆ ಬಾಕಿ ಇರುವ ವಿದ್ಯುತ್ ಬಿಲ್ ಮನ್ನಾ ಮಾಡಲಾಗುವುದು. ಜೊತೆಗೆ ಅಪ್‌ ಆಡಳಿತವಿರುವ ದೆಹಲಿ ಮತ್ತು ಪಂಜಾಬ್‌ ರೀತಿಯಲ್ಲಿಯೇ ಎಲ್ಲಾ ಭರವಸೆ ಈಡೇರಿಸಲಾಗುತ್ತೆ ಅಂತ ಕೇಜ್ರಿವಾಲ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply