ಅಜಾದಿ ಕಾ ಅಮೃತ್‌ ಮೋಹತ್ಸವದ ಭಾಗವಾಗಿ ಒಟ್ಟು 80,000 ಕೆಜಿ ಡ್ರಗ್ಸ್‌ ಭಸ್ಮ ಮಾಡಿದ ಕೇಂದ್ರ!

masthmagaa.com:

ದೇಶಾದ್ಯಂತ 4 ಸ್ಥಳಗಳಲ್ಲಿ 30 ಸಾವಿರ ಕೆಜಿಗಿಂತಲೂ ಅಧಿಕ ಡ್ರಗ್ಸ್‌ನ್ನ ಕೇಂದ್ರ ಗೃಹ ಸಚಿವ ಅಮಿತ್‌ ಶಾರ ವರ್ಚುವಲ್‌ ಉಪಸ್ಥಿತಿಯಲ್ಲಿ ಸುಡಲಾಗಿದೆ. ದಿಲ್ಲಿ, ಚೆನ್ನೈ, ಗುವಾಹಟಿ ಮತ್ತು ಕೊಲ್ಕತ್ತಾಗಳಲ್ಲಿ ವಶಪಡಿಸಿಕೊಂಡಿದ್ದ ಡ್ರಗ್ಸ್‌ನ್ನ ಸುಟ್ಟಿದ್ದು, ಚಂಡೀಗಢದಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅಮಿತ್ ಶಾ ಭಾಗಿಯಾಗಿದ್ದಾರೆ.‌ ಇನ್ನು ಈ ಬಗ್ಗೆ ಮಾತನಾಡಿದ ಶಾ, ಅಜಾದಿ ಕಾ ಅಮೃತ್‌ ಮಹೋತ್ಸವದ ಭಾಗವಾಗಿ 75 ಸಾವಿರ ಕೆಜಿ ನಶಾ ಸಾಮಾಗ್ರಿಯನ್ನ ನಾಶಪಡಿಸೋದಾಗಿ ಪ್ರತಿಜ್ಞೆ ಮಾಡಲಾಗಿದೆ ಅಂತ ಹೇಳಿದ್ದಾರೆ. ಜೊತೆಗೆ ಈಗಾಗಲೇ 82 ಸಾವಿರ ಕೆಜಿ ಮಾದಕ ವಸ್ತುಗಳನ್ನ ಸುಟ್ಟು ಹಾಕಲಾಗಿದೆ. ಆಗಸ್ಟ್‌ 15ರ ಹೊತ್ತಿಗೆ ಇದು 1 ಲಕ್ಷ ಕೆಜಿ ತಲುಪುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply