ಜಮ್ಮು-ಕಾಶ್ಮೀರ: ಬಸ್‌ ಪ್ರಪಾತಕ್ಕೆ ಬಿದ್ದು 38 ಮಂದಿ ಪ್ರಯಾಣಿಕರ ಸಾವು!

masthmagaa.com:

ಬಸ್‌ವೊಂದು 200 ಮೀಟರ್‌ ಅಡಿ ಪ್ರಪಾತಕ್ಕೆ ಬಿದ್ದು 38 ಮಂದಿ ಪ್ರಯಾಣಿಕರು ಬಲಿಯಾಗಿರೋ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಕಿಶ್ತ್ವಾರ್‌ನಿಂದ ಜಮ್ಮುಗೆ ಪ್ರಯಾಣಿಸ್ತಿದ್ದ 55 ಮಂದಿ ಪ್ರಯಾಣಿಕರನ್ನ ಹೊತ್ತ ಬಸ್‌, ತಿರುವು ತೆಗೆದುಕೊಳ್ಳೋವಾಗ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಈ ಘಟನೆ ಜಮ್ಮು-ಕಾಶ್ಮೀರದ ಡೋಡಾ ಜಿಲ್ಲೆಯ ಅಸ್ಸರ್‌ ಪ್ರದೇಶದಲ್ಲಿ ಸಂಭವಿಸಿದೆ. ದುರ್ಘಟನೆ ನಡೆದ ಕೆಲವೇ ಹೊತ್ತಲ್ಲಿ ಪೊಲೀಸ್‌, ರಕ್ಷಣಾ ತಂಡ ಸೇರಿದಂತೆ ಅಲ್ಲಿನ ಲೋಕಲ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಚರಣೆ ಪ್ರಾರಂಭಿಸಿದ್ದಾರೆ. ಇನ್ನು ಈ ಘಟನೆಯಲ್ಲಿ ಗಾಯಗೊಂಡವರನ್ನ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಅಂತ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply