2020ರಲ್ಲಿ ದೇಶದಲ್ಲಿ 81.16 ಲಕ್ಷ ಸಾವು: ಕೋವಿಡ್‌ನಿಂದ ಅಲ್ಲ ಅಂದ ನೀತಿ ಆಯೋಗ

masthmagaa.com:

ದೇಶದಲ್ಲಿ ಸಾವಿನ ದಾಖಲಾತಿಗಳು ಏರಿಕೆಯನ್ನ ತೋರಿಸಿದೆ ಅಂತ ಇತ್ತೀಚಿನ ವರದಿಯೊಂದು ತಿಳಿಸಿದೆ. ರಿಜಿಸ್ಟ್ರಾರ್ ಜನರಲ್ ಕಚೇರಿ ಈ ವರದಿಯನ್ನ ಬಿಡುಗಡೆ ಮಾಡಿದ್ದು, ಇದ್ರ ಅಂಕಿ-ಅಂಶಗಳ ಪ್ರಕಾರ 2020ರ ಕೋವಿಡ್‌ ಟೈಮಲ್ಲಿ ಒಟ್ಟು 81.16 ಲಕ್ಷ ಸಾವುಗಳು ದಾಖಲಾಗಿವೆ. ಈ ಸಂಖ್ಯೆ 2019ರಲ್ಲಿ ದಾಖಲಾದ ಸಂಖ್ಯೆಗಿಂತ ಶೇಕಡ 6 ರಷ್ಟು ಅಧಿಕವಾಗಿದೆ. 2019ರಲ್ಲಿ 76.41 ಲಕ್ಷ ಸಾವುಗಳು ವರದಿಯಾಗಿದ್ವು. ಇನ್ನು ಜನನದ ದಾಖಲಾತಿಗಳು 2019ರಲ್ಲಿ 2.48 ಕೋಟಿಯಿದ್ದು, 2020ರಲ್ಲಿ 2.42 ಕೋಟಿಗೆ ಇಳಿಕೆಯಾಗಿವೆ. ಅಂದ್ಹಾಗೆ ಇವು ನಿಜವಾದ ಸಂಖ್ಯೆಗಳಲ್ಲ. ಬರಿ ದಾಖಲಾದ ಸಾವು ಮತ್ತು ಜನನದ ಸಂಖ್ಯೆಗಳು. ದಾಖಲಾಗದೇ ಅದೆಷ್ಟೋ ಜನ ಪ್ರಾಣಬಿಟ್ಟಿರ್ತಾರೆ.
ಇನ್ನೊಂದ ಕಡೆ ಸಾವಿನ ಏರಿಕೆಗೆ ಕೋವಿಡ್‌ ಕಾರಣ ಅಂತ ಕೆಲವು ಏಜೆನ್ಸಿಗಳು ಅತಿಯಾಗಿ ಬಿಂಬಿಸ್ತಿದಾವೆ. ಇದಕ್ಕೆ ನೀತಿ ಆಯೋಗದ ಸದಸ್ಯ ವಿ ಕೆ ಪೌಲ್‌ ಪ್ರತಿಕ್ರಿಯಿಸಿದ್ದಾರೆ. ಅವ್ರು 2020 ರಲ್ಲಿ ಹೆಚ್ಚಿದ 4.75 ಲಕ್ಷ ಸಾವುಗಳು ಸಂಪೂರ್ಣವಾಗಿ ಕೋವಿಡ್‌ ಸಾವುಗಳಿಂದ ಅಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಅಧಿಕೃತ ಮಾಹಿತಿಯ ಪ್ರಕಾರ 2020ರಲ್ಲಿ ಕೋವಿಡ್‌ ಸಾವುಗಳು 1.49 ಲಕ್ಷ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply