ಫೋರ್ಬ್ಸ್‌ ಪ್ರಭಾವಿ ಮಹಿಳೆಯರ ಲಿಸ್ಟ್‌ನಲ್ಲಿ ನಿರ್ಮಲಾ ಸೀತಾರಾಮನ್‌!

masthmagaa.com:

ಅಮೆರಿಕದ ಪ್ರಸಿದ್ಧ ಫೋರ್ಬ್ಸ್‌ ಪತ್ರಿಕೆ ತನ್ನ ವಿಶ್ವದ ಅತ್ಯಂತ ಪವರ್‌ಫುಲ್‌ ಮಹಿಳೆಯರ ಲಿಸ್ಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವ್ರನ್ನ ಹೆಸರಿಸಿದೆ. ಹೌದು ಫೋರ್ಬ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಲಿಸ್ಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವ್ರಿಗೆ 32ನೇ ಸ್ಥಾನ ಸಿಕ್ಕಿದೆ. ಜೊತೆಗೆ ಭಾರತೀಯ ಇತರೆ ಪ್ರಭಾವಿ ಮಹಿಳೆಯರಾದ HCL ಕಾರ್ಪೋರೇಷನ್‌ನ CEO ರೋಶಿನಿ ನಡಾರ್‌ ಮಲ್ಹೋತ್ರಾ ಅವ್ರಿಗೆ 60ನೇ ಸ್ಥಾನ ಸಿಕ್ಕಿದ್ರೆ, ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾದ ಅಧ್ಯಕ್ಷರಾದ ಸೋಮಾ ಮೊಂಡಲ್‌ಗೆ 70ನೇ ಸ್ಥಾನ ಮತ್ತು ಬಯೋಕಾನ್‌ನ ಸ್ಥಾಪಕರಾದ ಕಿರಣ್‌ ಮಜುಂದಾರ್‌-ಶಾಗೆ 76ನೇ ಸ್ಥಾನ ಸಿಕ್ಕಿದೆ. ಅಂದ್ಹಾಗೆ ಈ ಲಿಸ್ಟ್‌ನಲ್ಲಿ ಫೇಮಸ್‌ ಪರ್ಸನಾಲಿಟಿಗಳಾದ ಅಮೆರಿಕದ ಉಪರಾಷ್ಟ್ರಪತಿ ಕಮಲಾ ಹ್ಯಾರಿಸ್‌ ಮತ್ತು ಖ್ಯಾತ ಗಾಯಕಿ ಟೇಲರ್‌ ಸ್ವಿಫ್ಟ್‌ ಹೆಸರು ಕೂಡ ಸೇರ್ಕೊಂಡಿದೆ. ಈ ಲಿಸ್ಟ್‌ನಲ್ಲಿ ಯುರೋಪಿಯನ್‌ ಕಮಿಷನ್‌ ಚೀಫ್‌ ಉರ್ಸುಲಾ ವಾನ್‌ ಡೆರ್‌ ಲೇಯನ್‌ ಅವ್ರು ಟಾಪ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply