ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿಗೆ ನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮ!

masthmagaa.com:

ಸಂವಿಧಾನದ 370ನೇ ವಿಧಿ ರದ್ಧಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭಾರಿ ಬದಲಾವಣೆಯಾಗಿದೆ. ಜನ ಸಾಮಾನ್ಯರು ತಮ್ಮಿಷ್ಟದಂತೆ ಜೀವನ ನಡೆಸುತ್ತಿದ್ದಾರೆ ಅಂತ ಅಲ್ಲಿನ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ. 370ನೇ ವಿಧಿ ರದ್ಧತಿಯ ನಾಲ್ಕನೇ ವಾರ್ಷಿಕೋತ್ಸವದ ವೇಳೆ ಮಾತನಾಡಿರುವ ಸಿನ್ಹಾ, ಕಾಶ್ಮೀರದ ಯುವಕರು ಈಗ ರಾತ್ರಿ ವೇಳೆ ಧೈರ್ಯವಾಗಿ ಹೊರಗೆ ಸುತ್ತಾಡುತ್ತಿದ್ದಾರೆ ಅಂತ ಹೇಳಿದ್ದಾರೆ. ಇತ್ತ ಇದಕ್ಕೆ ಪ್ರತಿಕ್ರಿಯಿಸಿರುವ PDP ನಾಯಕಿ ಮೆಹಬೂಬ ಮುಫ್ತಿ, ನನ್ನನ್ನ ಗೃಹಬಂಧನದಲ್ಲಿ ಇರಿಸಲಾಗಿದೆ. ಹೋರಾಟ ಮಾಡೋದನ್ನ ನಮ್ಮ ಪಕ್ಷ ಕಂಟಿನ್ಯೂ ಮಾಡುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು, ಸಂವಿಧಾನದ 370ನೇ ವಿಧಿ ರದ್ದು ಮಾಡಿ ರಾಜ್ಯವನ್ನ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನೊ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು.

-masthmagaa.com

Contact Us for Advertisement

Leave a Reply