ಐವರು ಭಾರತೀಯ ನಾವಿಕರನ್ನ ರಿಲೀಸ್‌ ಮಾಡಿದ ಇರಾನ್‌ ನೇವಿ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿಇರಾನ್‌ ವಶಪಡಿಸಿಕೊಂಡಿದ್ದ ಇಸ್ರೇಲ್‌ ಹಡಗಿನಲ್ಲಿದ್ದ ಐವರು ಭಾರತೀಯರನ್ನ ಇರಾನ್‌ ರಿಲೀಸ್‌ ಮಾಡಿದೆ. ಇಸ್ರೇಲ್‌ ವಿರುದ್ದದ ಸಂಘರ್ಷದಿಂದಾಗಿ ಇರಾನ್‌ ನೇವಿ ಏಪ್ರಿಲ್‌ 13ರಂದು ಹಾರ್ಮುಜ್‌ ಜಲಸಂಧಿ ಬಳಿ ಇಸ್ರೇಲ್‌ಗೆ ಸಂಬಂಧಿಸಿದ ಕಂಟೇನರ್‌ ಹಡಗೊಂದನ್ನ ವಶಪಡಿಸಿಕೊಂಡಿತ್ತು. ಈ ವೇಳೆ ಹಡಗಿನಲ್ಲಿದ್ದ ಭಾರತದ 17 ಪ್ರಜೆಗಳನ್ನ ಕೂಡ ಇರಾನ್‌ ಅರೆಸ್ಟ್‌ ಮಾಡಿತ್ತು. ಆದ್ರೆ ಈ ಪೈಕಿ ಒಬ್ರು ಆಗ್ಲೆ ಭಾರತಕ್ಕೆ ವಾಪಸ್ಸಾಗಿದ್ರು. ಆಗ ಭಾರತ ಸರ್ಕಾರ ಇರಾನ್‌ನ ಸಂಪರ್ಕ ಮಾಡಿ ಉಳಿದ ಭಾರತೀಯರನ್ನ ರಿಲೀಸ್‌ ಮಾಡುವಂತೆ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಗುರುವಾರ 5 ಭಾರತೀಯ ನಾವಿಕರನ್ನ ಇರಾನ್‌ ರಿಲೀಸ್‌ ಮಾಡಿದೆ. ಈ ಬಗ್ಗೆ ಇರಾನ್‌ನಲ್ಲಿರೊ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ. ಅಲ್ದೇ ನಮ್ಮ ಮನವಿಗೆ ಸಹಕಾರ ನೀಡಿದ್ದಕ್ಕೆ ಇರಾನ್‌ಗೆ ಧನ್ಯವಾದ ಅಂತೇಳಿದೆ.

-masthmagaa.com

Contact Us for Advertisement

Leave a Reply