ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ಮೇಕೆದಾಟು ಬಳಿ ನೀರುಪಾಲು!

masthmagaa.com:

ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಮೇಕೆದಾಟು ಬಳಿಯ ಸಂಗಮದ ಕಾವೇರಿ ನದಿಯಲ್ಲಿ ನಡೆದಿದೆ. ಮೃತರನ್ನ ಹರ್ಷಿತಾ, ಅಭಿಷೇಕ್, ತೇಜಸ್, ವರ್ಷ ಹಾಗೂ ನೇಹಾ ಅಂತ ಗುರುತಿಸಲಾಗಿದೆ. ಇನ್ನುಳಿದ 7 ಮಂದಿ ವಿದ್ಯಾರ್ಥಿಗಳು ಪಾರಾಗಿದ್ದಾರೆ‌. ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದ ಇವ್ರು ಪ್ರವಾಸಕ್ಕೆ ಬಂದಿದ್ರು. ಮಧ್ಯಾಹ್ನ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ನದಿಯ ಸುಳಿಯಲ್ಲಿ ಸಿಲುಕಿ ಸಾವಿಗೀಡಾಗಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply