ತೆಲಂಗಾಣದಲ್ಲಿ ತಲೆಯೆತ್ತಲಿದೆ ಫಾಕ್ಸ್‌ಕಾನ್‌ ಐಫೋನ್‌ ತಯಾರಕ ಘಟಕ!

masthmagaa.com:

ಆ್ಯಪಲ್‌ನ ಐಫೋನ್ ತಯಾರಕ ಫಾಕ್ಸ್​ಕಾನ್ ಕಂಪನಿ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಘಟಕಗಳನ್ನು ಸ್ಥಾಪಿಸುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ ಈಗಾಗಲೇ ಏರ್​ಪೋರ್ಟ್ ಬಳಿ ಇರುವ ದೇವನಹಳ್ಳಿ ಬಳಿ ಒಂದು ದೊಡ್ಡ ಪ್ಲಾಟ್ ಖರೀದಿಸಿದೆ. ಇದೀಗ ಹೈದರಾಬಾದ್ ಸಮೀಪ ಕೊಂಗರ ಕಲಾನ್​ನಲ್ಲಿ ಫಾಕ್ಸ್​ಕಾನ್ ಘಟಕ ಸ್ಥಾಪನೆ ಆಗುತ್ತಿರುವ ವಿಚಾರವನ್ನು ತೆಲಂಗಾಣದ ಐಟಿ ಸಚಿವ ಕೆ.ಟಿ ರಾಮರಾವ್ ತಿಳಿಸಿದ್ದಾರೆ. ಫಾಕ್ಸ್​ಕಾನ್ ಘಟಕ ಸ್ಥಾಪನೆಗೆ ತೆಲಂಗಾಣ ಸರ್ಕಾರ ಮತ್ತು ಫಾಕ್ಸ್​ಕಾನ್ ಕಂಪನಿ ಒಪ್ಪಂದಕ್ಕೆ ಸಹಿ ಹಾಕಿವೆ. ಇನ್ನು ಮೊದಲ ಹಂತದಲ್ಲಿ ಫಾಕ್ಸ್‌ಕಾನ್‌ 500 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 4,100 ಕೋಟಿ ರೂಪಾಯಿ ಹಣ ಹೂಡಿಕೆ ಮಾಡಲಿದೆ. ಇದ್ರಿಂದ 25 ಸಾವಿರದಷ್ಟು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಅಂತ ರಾಮ್‌ರಾವ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply