ಪಾಕ್ ಹಿಂದೂ FILES, ಅಲ್ಪಸಂಖ್ಯಾತರನ್ನ ಬದುಕಲು ಬಿಡುತ್ತಿಲ್ಲ!

masthmagaa.com:

ಕಳೆದ ಕೆಲ ತಿಂಗಳಲ್ಲಿ ಪಾಕ್‌ನಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವ್ರನ್ನ ಟಾರ್ಗೆಟ್‌ ಮಾಡುವ ಕೃತ್ಯಗಳು ಹೆಚ್ಚಾಗಿವೆ. ಇದೀಗ 6 ವರ್ಷದ ಪುಟ್ಟ ಹಿಂದೂ ಬಾಲಕಿಯನ್ನ ಅಪಹರಿಸಿ ಲೈಂಗಿಕ ಕಿರುಕುಳ ನೀಡಿರೋ ಘಟನೆ ಬೆಳಕಿಗೆ ಬಂದಿದೆ. ಶೇಖ್‌ ಬಿರ್ಕಿಯೊ ಗ್ರಾಮದಲ್ಲಿ ಘಟನೆ ನಡೆದಿದೆ. ಬಾಲಕಿ ಹೊರಗಡೆ ಆಟ ಆಡ್ತಿದ್ದ ವೇಳೆ 23 ವರ್ಷದ ಇಬ್ಬರು ಮುಸ್ಲಿಂ ಯುವಕರು ಆಕೆಯನ್ನ ಅಪಹರಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಲೈಂಗಿಕ ಹಿಂಸೆ ನೀಡಿದ್ದಾರೆ. ಬಾಲಕಿ ಆಕೆಯ ಮನೆಯಿಂದ 6 ಕಿಲೋ ಮೀಟರ್‌ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ಲು ಅಂತ ಆಕೆಯ ಪೋಷಕರು ತಿಳಿಸಿದ್ದಾರೆ. ನಂತರ ಬಾಲಕಿಯನ್ನ ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಪಿಗಳನ್ನ ಅರೆಸ್ಟ್‌ ಮಾಡಲಾಗಿದೆ ಅಂತ ಹೇಳಲಾಗಿದೆ. ಆದ್ರೆ ಪೊಲೀಸರು ಪ್ರಕರಣವನ್ನ ಸೀರಿಯಸ್‌ ತಗೋತಿಲ್ಲ ಹಾಗೂ ಕೇಸ್‌ಗೆ ಸಂಬಂಧಪಟ್ಟಂತೆ ಸಹಕಾರ ನೀಡ್ತಿಲ್ಲ ಅಂತ ಬಾಲಕಿಯ ಪೋಷಕರು ಆರೋಪಿಸಿದ್ದಾರೆ ಅಂತ ʻಬಿಟರ್‌ ವಿಂಟರ್‌ʼ ಮಾಧ್ಯಮ ವರದಿ ಮಾಡಿದೆ. ಅಂದ್ಹಾಗೆ ಈ ಶೇಖ್‌ ಬಿರ್ಕಿಯೊ ಗ್ರಾಮದಲ್ಲಿ ಹಾಗೂ Tando Allahyar ಜಿಲ್ಲೆಯಲ್ಲಿ ಹಿಂದೂ ಅಲ್ಪಸಂಖ್ಯಾತರನ್ನ ಟಾರ್ಗೆಟ್‌ ಮಾಡುವ ಕೃತ್ಯಗಳು ಜಾಸ್ತಿಆಗಿವೆ. ಕಳೆದ ಫೆಬ್ರವರಿಯಲ್ಲಿ ಮುಸ್ಲಿಂ ಗುಂಡಾಗಳು ಹಿಂದೂ ಅಲ್ಪ ಸಂಖ್ಯಾತರಿಗೆ ಸೇರಿದ ಮನೆಯೊಂದರ ಮೇಲೆ ದಾಳಿ ಮಾಡಿ, ಮನೆಗೆ ಬೆಂಕಿ ಹಚ್ಚಿದ್ರು. ಘಟನೆಯಲ್ಲಿ ಕುಟುಂಬಸ್ಥರು ಗಾಯಗೊಂಡಿದ್ರು. ಈ ಪ್ರಕರಣದಲ್ಲಿ ಕೂಡ ಅಲ್ಲಿನ ಪೊಲೀಸರು ಕೇಸ್‌ನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಅಂತ ಸಂತ್ರಸ್ತರು ಆರೋಪಿಸಿದ್ರು. ಅದಕ್ಕೂ ಸ್ವಲ್ಪ ಹಿಂದೆ ಹೋದ್ರೆ, 2022ರ ಅಕ್ಟೋಬರ್‌ನಲ್ಲಿ ಇದೇ ಶೇಖ್‌ ಬಿರ್ಕಿಯೊ ಗ್ರಾಮದಲ್ಲಿ 10 ವರ್ಷದ ಹಿಂದೂ ಬಾಲಕಿ ಮೀನಾ ಬಜಾನಿಯನ್ನ ಅಪಹರಿಸಲಾಗಿತ್ತು. ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ, ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡುವ ಉದ್ದೇಶದಿಂದ ಮೀನಾಳನ್ನ ಅಪಹರಿಸಲಾಗಿತ್ತು. ಬಳಿಕ ಬಾಲಕಿಯನ್ನ ರಕ್ಷಿಸಲಾಗಿತ್ತು. ಇವು ಬೆಳಕಿಗೆ ಬಂದಿರೊ ಕೇವಲ ಒಂದೆರೆಡು ಉದಾಹರಣೆಗಳಷ್ಟೇ. ಇಂಥ ಕೃತ್ಯಗಳು ಪಾಕ್‌ನಲ್ಲಿ ನಡಿತಾನೇ ಇರುತ್ತವೆ. ಇತ್ತ ಭಾರತ ಪಾಕ್‌ನಲ್ಲಿರೊ ಹಿಂದೂ ಅಲ್ಪಸಂಖ್ಯಾತರಿಗೆ ಸರಿಯಾದ ರಕ್ಷಣೆ ಕೊಡಬೇಕು ಅಂತ ಆಗ್ರಹಿಸುತ್ತಾ ಬಂದಿದೆ. ಆದ್ರೆ ಕೃತ್ಯಗಳು ನಡಿಯೋದು ಮಾತ್ರ ಕಡಿಮೆಯಾಗಿಲ್ಲ. ಇನ್ನೊಂದ್‌ ಕಡೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ಕಚೇರಿಯಲ್ಲಿ 2 ಸ್ಪೋಟಗಳು ಸಂಭವಿಸಿವೆ. ಘಟನೆಯಲ್ಲಿ ಕನಿಷ್ಠ 13 ಅಧಿಕಾರಿಗಳು ಸಾವನ್ನಪ್ಪಿ, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇನ್ನು 2009ಕ್ಕೂ ಮೊದಲು ಇಸ್ಲಾಮಿಸ್ಟ್‌ ಉಗ್ರರ ನಿಯಂತ್ರಣದಲ್ಲಿದ್ದ ಸ್ವಾಟ್‌ ವ್ಯಾಲಿಯ ಉಗ್ರ ನಿಗ್ರಹ ಕಚೇರಿಯಲ್ಲಿ ಸ್ಪೋಟ ಸಂಭವಿಸಿರೋದಾಗಿ ಅಲ್ಲಿನ ಪೊಲೀಸ್‌ ಚೀಫ್‌ ಅಖ್ತರ್‌ ಹಯಾತ್‌ ಹೇಳಿದ್ದಾರೆ. ಇನ್ನು ಈ ಸ್ಪೋಟಗಳು ಉಗ್ರ ದಾಳಿ ಅನ್ನೊಕೆ ಯಾವುದೇ ಸಾಕ್ಷ್ಯಗಳಿಲ್ಲ, ಎಲೆಕ್ಟ್ರಿಕ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಕಚೇರಿಯಲ್ಲಿದ್ದ ಮದ್ದು ಗುಂಡುಗಳು ಸಿಡಿದಿರಬಹುದು. ತನಿಖೆ ನಡೆಸಲಾಗ್ತಿದೆ ಅಂತ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply