ವಿದ್ಯಾರ್ಥಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಮಯನ್ಮಾರ್‌!‌

masthmagaa.com:

ಮಯನ್ಮಾರ್‌ ಜುಂಟಾ ಅಥ್ವಾ ಸೇನಾ ಆಡಳಿತ ಕಾಲೇಜು ವಿದ್ಯಾರ್ಥಿಗಳಿಗೆ ಮರಣದಂಡನೆಯನ್ನ ವಿಧಿಸಿದೆ ಅಂತ ವಿಶ್ವಸಂಸ್ಥೆ ಆರೋಪಿಸಿದೆ. ಕನಿಷ್ಠ 7 ವಿದ್ಯಾರ್ಥಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ತನ್ನ ಆಡಳಿತಕ್ಕೆ ವಿರೋಧ ವ್ಯಕ್ತ ಪಡಿಸೋರನ್ನ ದಮನ ಮಾಡೋಕೆ ಈ ರೀತಿ ಮಾಡಲಾಗ್ತಿದೆ ಅಂತ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಸ್ಥೆಯ ಹೈ ಕಮಿಷನರ್‌ ವಾಕರ್‌ ಟರ್ಕ್‌ ಹೇಳಿದ್ದಾರೆ. ಇನ್ನು ಏಪ್ರಿಲ್‌ನಲ್ಲಿ ಅಲ್ಲಿನ ಬ್ಯಾಂಕ್‌ ಒಂದರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ರು ಅಂತ ಆರೋಪಿಸಿ ಯಾಂಗೋನ್‌ ವಿವಿಯ ವಿದ್ಯಾರ್ಥಿಗಳನ್ನ ಸೇನೆ ಅರೆಸ್ಟ್‌ ಮಾಡಿತ್ತು. ಅವ್ರಿಗೆ ಮರಣದಂಡನೆ ನೀಡಿರೋ ಬಗ್ಗೆ ಯಾವುದೇ ಮಾಹಿತಿಯನ್ನ ಸೇನೆ ಬಿಟ್ಟುಕೊಟ್ಟಿಲ್ಲ. ಆದ್ರೆ ಈ ವಿಚಾರವಾಗಿ ತನಿಖೆ ನಡೆಸ್ತಿರೋದಾಗಿ ವಿಶ್ವಸಂಸ್ಥೆ ಹೇಳಿದೆ. ಅಂದ್ಹಾಗೆ 2021ರಲ್ಲಿ ಅಂಗ್‌ ಸನ್‌ ಸೂಕಿ ನೇತೃತ್ವದ ಸರ್ಕಾರವನ್ನ ಬೀಳಿಸಿ ಅಲ್ಲಿನ ಆಡಳಿತವನ್ನ ಸೇನೆ ವಹಿಸಿಕೊಂಡಾಗಿನಿಂದ ಮಯಾನ್ಮಾರ್‌ನಲ್ಲಿ ಸಂಪೂರ್ಣ ಅವ್ಯವಸ್ಥೆ ಉಂಟಾಗಿದೆ. ಸರ್ಕಾರ ತನಗೆ ಯಾರ ಮೇಲೆ ವಕ್ರ ದೃಷ್ಠಿ ಹಾಕುತ್ತೋ ಅವರನ್ನೆಲ್ಲಾ ಗಲ್ಲು ಶಕ್ಷೆ ಕೊಟ್ಟು ಕೊಲ್ತಾಯಿದೆ.

-masthmagaa.com

Contact Us for Advertisement

Leave a Reply