ಜಗತ್ತಿನಾದ್ಯಂತ ಮಕ್ಕಳ ಸಾವಿಗೆ ಕಾರಣವಾಗಿದ್ದ ಕೆಮ್ಮಿನ ಔಷಧಿಗಳಲ್ಲಿ ಭಾರತದ 7 ಔಷಧಿಗಳಿವೆ: WHO

masthmagaa.com:

ಜಗತ್ತಿನಾದ್ಯಂತ 300ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾಗಿದ್ದ ಕೆಮ್ಮಿನ ಸಿರಪ್‌ಗಳು ಕುರಿತು ವಿಶ್ವಸಂಸ್ಥೆ ತನಿಖೆ ನಡೆಸಿದೆ. ಈ ವೇಳೆ ಈ ನಕಲಿ ಕಾಫ್‌ ಸಿರಪ್‌ಗಳು 20 ಕಂಪನಿಗಳಿಂದ ಪೂರೈಕೆಯಾಗಿವೆ ಅಂತ ತಿಳಿದು ಬಂದಿದೆ. ಒಟ್ಟು 20 ಔಷಧಿಗಳಿಂದ ಸಾವುಗಳು ಸಂಭವಿಸಿದ್ದು, ಅದ್ರಲ್ಲಿ 7 ಔಷಧಗಳು ಭಾರತೀಯ ಕಂಪನಿಗಳಿಂದ ತಯಾರಿಸಲಾಗಿದೆ. ಇನ್ನುಳಿದ 13 ಸಿರಪ್‌ಗಳು ಇಂಡೋನೇಷ್ಯಾದಿಂದ ಪೂರೈಕೆಯಾಗಿವೆ ಅಂತ WHO ಅಧಿಕಾರಿಗಳು ತಿಳಿಸಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಉಜ್ಬೇಕಿಸ್ತಾನ್, ಗಾಂಬಿಯಾ ಮತ್ತು ನೈಜೀರಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಭಾರತದಲ್ಲಿ ತಯಾರಿಸಲಾದ ಔಷಧಿಗಳಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಅಂತ ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ಭಾರತ ಕೆಲವು ಕಂಪನಿಗಳ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಿದ್ದ ಭಾರತದ ಡ್ರಗ್‌ ಕಂಟ್ರೋಲ್‌, ಈ ಕುರಿತು ತನಿಖೆ ನಡೆಸುತ್ತಿದೆ.

-masthmagaa.com

Contact Us for Advertisement

Leave a Reply