ಇರಾನ್‌ನ ಕೆರ್ಮನ್‌ನಲ್ಲಿ ಸರಣಿ ಸ್ಪೋಟ: 70ಕ್ಕೂ ಹೆಚ್ಚು ಜನರು ಬಲಿ

masthmagaa.com:

ಇರಾನ್‌ನ ಕೆರ್ಮನ್‌ನಲ್ಲಿ ಭಾರಿ ಉಗ್ರದಾಳಿ ನಡೆದಿದೆ. ಇರಾನ್‌ ಕಮ್ಯಾಂಡರ್‌ ಕಾಸಿಮ್‌ ಸೋಲೆಮನಿ ಸಮಾಧಿ ಸ್ಥಳದಲ್ಲಿ ಸರಣಿ ಸ್ಪೋಟ ಉಂಟಾಗಿದೆ. ಘಟನೆಯಲ್ಲಿ 73 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ರೆ, 170ಕ್ಕೂ ಹೆಚ್ಚು ಜನ್ರು ಗಾಯಗೊಂಡಿದ್ದಾರೆ. 2020ರಲ್ಲಿ ಮರಣ ಹೊಂದಿದ್ದ ಜೆನರಲ್‌ ಸೊಲೇಮನಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋಕೆ ನೂರಾರು ಮಂದಿ ಅಲ್ಲಿ ನೆರೆದಿದ್ರು. ಈ ವೇಳೆ ಎರಡು ಸ್ಪೋಟಗಳು ಸಂಭವಿಸಿವೆ. ಎರಡು ಬ್ಯಾಗ್‌ಗಳಲ್ಲಿದ್ದ ಬಾಂಬ್‌ಗಳು ಸ್ಪೋಟಗೊಂಡಿವೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ರಿಮೋಟ್‌ ಕಂಟ್ರೋಲ್‌ ಮೂಲಕ ಬ್ಲಾಸ್ಟ್‌ ಮಾಡಿರೋ ಶಂಕೆ ವ್ಯಕ್ತವಾಗಿದೆ. ಮೊದಲ ಸ್ಪೋಟ ಸಂಭವಿಸಿದ 10 ನಿಮಿಷ ಆದ್ಮೇಲೆ ಇನ್ನೊಂದು ಸ್ಪೋಟಕ ಸಿಡಿಸಲಾಗಿದೆ. ಆದ್ರೆ ಇದುವರೆಗೂ ದಾಳಿಯ ಹೊಣೆಯನ್ನ ಯಾವ ಸಂಘಟನೆಗಳೂ ಹೊತ್ತುಕೊಂಡಿಲ್ಲ. ಅಂದ್ಹಾಗೆ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲ ಕಮೇನಿ ನಂತರ ಜೆನರಲ್‌ ಸೊಲೇಮನಿ ಮೋಸ್ಟ್‌ ಪವರ್‌ಫುಲ್‌ ವ್ಯಕ್ತಿ ಎನಿಸಿಕೊಂಡಿದ್ದ. ಈತನನ್ನ ಕೊಲ್ಲೋಕೆ ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಡ್ರೋನ್‌ ದಾಳಿ ನಡೆಸೋಕೆ ಆದೇಶ ನೀಡಿದ್ರು. ಟ್ರಂಪ್‌ ಸೋಲೆಮನಿಯನ್ನ ಪ್ರಪಂಚದ ನಂಬರ್‌ ಒನ್‌ ಟೆರರಿಸ್ಟ್ ಅಂತಾನೆ ಕರೀತಿದ್ರು. ಈ ವ್ಯಕ್ತಿಯ ಸಮಾಧಿಯ ಬಳಿಯೇ ಈಗ ಸ್ಪೋಟಗಳು ಸಂಭವಿಸಿವೆ.

-masthmagaa.com

 

Contact Us for Advertisement

Leave a Reply