ಸಂಸತ್ತಿನಿದ 73ಕ್ಕೂ ಸಂಸದರ ಅಮಾನತು: ಕಾರಣವೇನು?

masthmagaa.com:

ಕಲಾಪಗಳಿಗೆ ಅಡ್ಡಿಪಡಿಸಿದ ವಿಚಾರವಾಗಿ 73ಕ್ಕೂ ಹೆಚ್ಚು ಪ್ರತಿಪಕ್ಷಗಳ ಸಂಸದರನ್ನು ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ. ಹೆಚ್ಚಿನ ಸಂಸದರನ್ನು ಅಧಿವೇಶನ ಮುಗಿಯೋ ವರೆಗೂ ಸಸ್ಪೆಂಡ್‌ ಮಾಡಲಾಗಿದೆ. ರಾಜ್ಯಸಭೆಯಿಂದ 40 ಕ್ಕೂ ಹೆಚ್ಚು ಸಂಸದರು ಸಸ್ಪೆಂಡ್‌ ಆಗಿದ್ರೆ. ಲೋಕಸಭೆಯಿಂದ ಕಾಂಗ್ರೆಸ್‌ ನಾಯಕ ಅದೀರ್‌ ರಂಜನ್‌ ಚೌಧರಿ ಸೇರಿ 33 ಕ್ಕೂ ಹೆಚ್ಚು ಸಂಸದರು ಅರೆಸ್ಟ್‌ ಆಗಿದ್ದಾರೆ. ಸಂಸತ್‌ ಭದ್ರತಾ ಲೋಪದ ವಿರುದ್ಧ ಹಾಗೂ ಜಮ್ಮು ಕಾಶ್ಮೀರ ಮರುಸಂಘಟನೆ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಬಿಲ್‌ಗಳ ವಿರುದ್ಧ ಉಭಯ ಸದನಗಳಲ್ಲಿ ವಿಪಕ್ಷಗಳ ಪ್ರತಿಭಟನೆ ನಡೆಸಿವೆ. ಅಲ್ಲದೆ ʻಬಿಜೆಪಿ ಜವಾಬ್‌ ದೋ, ಸದನ್‌ ಸೆ ಭಾಗ್ನಾ ಬಂದ್‌ ಕರೋʼ ಅಂದ್ರೆ ʻಬಿಜೆಪಿ ಉತ್ತರ ಕೊಡು, ಸದನದಿಂದ ಓಡೋದನ್ನ ನಿಲ್ಲಿಸುʼ ಅನ್ನೋ ಘೋಷಣೆಗಳನ್ನ ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಸಂಸತ್‌ನಲ್ಲಿ ಗಲಭೆ ಎಬ್ಬಿಸಿದ ಸಂಸದರನ್ನ ಉಭಯ ಸದನಗಳ ಸಭಾಧ್ಯಕ್ಷರು ಅಮಾನತು ಮಾಡೋಕೆ ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ I.N.D.I ಮೈತ್ರಿ ಕೂಟದ ಸಂಸದರು, ಆದ್ರೆ ಎಲ್ಲರೂ ಸಸ್ಪೆಂಡ್‌ ಆಗ್ಬೇಕು ಅಂತ ಮತ್ತಷ್ಟು ಪ್ರತಿಭಟನೆ ಮಾಡೋಕೆ ಕಡೆಕೊಟ್ಟಿವೆ.

-masthmagaa.com

Contact Us for Advertisement

Leave a Reply