ಜಮ್ಮು-ಕಾಶ್ಮೀರ: 8 ಜನ ಭಯೋತ್ಪಾದಕರ ಬಂಧನ

masthmagaa.com:

ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ದೊಡ್ಡ ಉಗ್ರ ಕಾರ್ಯಾಚರಣೆಯಾಗಿದೆ. ಸುಮಾರು 30 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ 8 ಜನ ಉಗ್ರರನ್ನ ಬಂಧಿಸಿರೋದಾಗಿ ಪೊಲೀಸರು ಹೇಳಿದ್ದಾರೆ. ಈ ಬಂಧಿತ ಉಗ್ರರಲ್ಲಿ ಕೆಲವು ಸರ್ಕಾರಿ ಉದ್ಯೋಗದಲ್ಲಿದ್ರೆ ಇನ್ನೂ ಕೆಲವರು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ಇನ್ನೂ ಆತಂಕಕಾರಿ ವಿಚಾರ ಅಂದ್ರೆ ಇದರಲ್ಲಿ ಕೆಲವರು ಕೋರ್ಟ್‌ನಲ್ಲಿ ಕೆಲಸ ಮಾಡ್ತಿದ್ರು ಅಂತ ತಿಳಿದು ಬಂದಿದೆ. ಬಂಧಿತರು ಕೊಲೆ, ಅಪಹರಣ ಸೇರಿದಂತೆ ಹಲವು ಆರೋಪಗಳನ್ನ ಎದುರಿಸುತ್ತಿದ್ದು, ಇಷ್ಟು ವರ್ಷ ತಲೆಮರೆಸಿಕೊಂಡಿದ್ದರು ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply