ಭಾರತ ಪೌರತ್ವ ಸಿಗದೇ 800 ಪಾಕ್‌ ಹಿಂದೂಗಳು ಸ್ವದೇಶಕ್ಕೆ ವಾಪಸ್‌!

masthmagaa.com:

ಭಾರತದ ಪೌರತ್ವ ಸಿಗದೇ 800 ಜನ ಪಾಕ್‌ ಹಿಂದೂಗಳು ವಾಪಸ್‌ ಹೋಗಿರೋದು ಈಗ ಬೆಳಕಿಗೆ ಬಂದಿದೆ.‌ ಭಾರತದಲ್ಲಿ ಪಾಕಿಸ್ತಾನದ ಅಲ್ಪಸಂಖ್ಯಾತ ವಲಸಿಗರ ಹಕ್ಕುಗಳಿಗಾಗಿ ಹೋರಾಡುವ ಸೀಮಂತ್‌ ಲೋಕ್‌ ಸಂಘಟನೆ(SLS) ಈ ವಿಚಾರವನ್ನ ತಿಳಿಸಿದೆ. ಈ 800 ಪಾಕ್‌ ಹಿಂದೂಗಳು ರಾಜಸ್ಥಾನದಲ್ಲಿ ತುಂಬಾ ವರ್ಷಗಳಿಂದ ನೆಲೆಸಿದ್ರು. ಆದ್ರೆ ಭಾರತದ ಪೌರತ್ವ ಸಿಗದ ಕಾರಣ ಕಳೆದ ವರ್ಷ ಪಾಕ್‌ಗೆ ವಾಪಸ್‌ ಹೋಗಿದ್ದಾರೆ ಅಂತ SLS ಸಂಘಟನೆ ಹೇಳಿದೆ. ಪಾಕ್‌ಗೆ ಹೋದ್ಮೇಲೆ ಇವ್ರನ್ನ ತುಂಬಾ ಹೀನಾಯವಾಗಿ ನೋಡಲಾಗುತ್ತೆ. ಪಾಕಿಸ್ತಾನದ ಏಜೆನ್ಸಿಗಳು ಭಾರತಕ್ಕೆ ಅಪಮಾನ ಮಾಡಲು ಇವ್ರನ್ನ ಮಾಧ್ಯಮಗಳಲ್ಲಿ ಪ್ರದರ್ಶನ ಮಾಡಿದೆ. ಭಾರತದಲ್ಲಿ ಇವ್ರನ್ನ ಸರಿಯಾಗಿ ನೋಡ್ಕೊಂಡಿಲ್ಲ ಅಂತ ಹೇಳಿಕೆಗಳನ್ನ ನೀಡಿಸಿದೆ ಅಂತ SLSನ ಅಧ್ಯಕ್ಷ ಹಿಂದು ಸಿಂಗ್‌ ಸೊಧಾ ಹೇಳಿದ್ದಾರೆ. 2018ರಲ್ಲಿ ಕೇಂದ್ರ ಗೃಹ ಇಲಾಖೆ ಪೌರತ್ವಕ್ಕಾಗಿ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸೋ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಜೊತೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ, ಕ್ರಿಶ್ಚಿಯನ್‌, ಸಿಖ್‌, ಪಾರ್ಸಿ, ಜೈನ್‌ ಮತ್ತು ಬೌದ್ಧ ಧರ್ಮದವ್ರಿಗೆ ಪೌರತ್ವ ನೀಡಲು 7 ರಾಜ್ಯಗಳ 16 ಜಿಲ್ಲಾಧಿಕಾರಿಗಳನ್ನ ನೇಮಿಸಿತ್ತು. 2021ರ ಮೇನಲ್ಲಿ ಇದನ್ನ ಮತ್ತೆ 5 ರಾಜ್ಯದ 13 ಜಿಲ್ಲಾಧಿಕಾರಿಗಳಿಗೆ ವಿಸ್ತರಿಸಲಾಯ್ತು. ಆದ್ರೆ ಇದೆಲ್ಲ ಆನ್ಲೈನ್‌ ಆದ್ರೂ ಕೂಡ ಗೃಹ ಇಲಾಖೆ ಎಕ್ಸ್ಪೈರ್‌ ಆದ ಪಾಕ್‌ ವೀಸಾಗಳನ್ನ ಅಕ್ಸೆಪ್ಟ್‌ ಮಾಡಲ್ಲ. ಹಾಗಾಗಿ ಇವ್ರು ಮತ್ತೆ ದಿಲ್ಲಿಯಲ್ಲಿರೋ ಪಾಕ್‌ ರಾಯಭಾರಿ ಕಚೇರಿಗೆ ಹೋಗಿ ತಮ್ಮ ವೀಸಾವನ್ನ ರಿನ್ಯೂ ಮಾಡ್ಸ್ಕೋಬೇಕು. ಆದ್ರೆ ಅದಕ್ಕೆ ಅಲ್ಲಿ ಸಿಕ್ಕಾಪಟ್ಟೆ ಕರ್ಚಾಗುತ್ತೆ. ಒಂದು ಕುಟುಂಬದಲ್ಲಿ 10 ಜನ ಇದ್ರೆ ಸುಮಾರು 1 ಲಕ್ಷ ತೆರಬೇಕಾಗುತ್ತೆ. ಪಾಕ್‌ನಿಂದ ಕಷ್ಟಪಟ್ಟು ಬಂದ ಇವ್ರು ಅಷ್ಟೆಲ್ಲ ಹಣ ಹೇಗೆ ತರ್ತಾರೆ ಅಂತ ಸಿಂಗ್‌ ಸೊಧಾ ಹೇಳಿದ್ದಾರೆ. ಜೊತೆಗೆ ಆನ್ಲೈನ್‌ ಅಪ್ಲೈ ಮಾಡದಷ್ಟೇ ಅಲ್ಲದೇ ಎಲ್ಲ ದಾಖಾಲಾತಿಗಳನ್ನ ಜಿಲ್ಲಾಧಿಕಾರಿಗಳ ಹತ್ರ ಸಬ್ಮಿಟ್‌ ಮಾಡ್ಬೇಕು. ಅದು ಇನ್ನೂ ಕಷ್ಟ ಅಂತ ಅವ್ರು ಹೇಳ್ಕೊಂಡಿದ್ದಾರೆ. ಇದನ್ನೆಲ್ಲ ಸರಿಪಡಿಸೋಕೆ ಅಂತಾನೆ ಸಿಎಎ ಪೌರತ್ವ ತಿದ್ದುಪಡಿ ಕಾಯ್ದೆ ಬಂದಿದೆಯಾದ್ರು ಗೃಹ ಇಲಾಖೆ ಅದನ್ನ ಸಂಪೂರ್ಣವಾಗಿ ಮತ್ತು ಸರಿಯಾಗಿ ಜಾರಿ ಮಾಡಿಲ್ಲ ಅಂತ ಹೇಳಲಾಗ್ತಿದೆ. ಇನ್ನು ರಾಜಸ್ಥಾನದಲ್ಲಿ ಸುಮಾರು 25 ಸಾವಿರ ಪಾಕಿಸ್ತಾನಿ ಹಿಂದೂಗಳು ಇದ್ದು. ಎರಡು ದಶಕಗಳಿಂದ ಪೌರತ್ವಕ್ಕಾಗಿ ಕಾಯ್ತಾ ಇದ್ದೀವಿ ಅಂತ ಸಿಂಗ್‌ ಸೋಧಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply