ಪಾಕ್‌ನಲ್ಲಿ ಧಾರಾಕಾರ ಮಳೆ: 87 ಸಾವು, 82 ಜನರಿಗೆ ಗಾಯ!

masthmagaa.com:

ಪಾಕಿಸ್ತಾನದಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆ ಸುರಿತಿದೆ. ಪರಿಣಾಮ ಇಲ್ಲಿವರೆಗೆ ಒಟ್ಟು 87 ಜನ ಮೃತಪಟ್ಟಿದ್ದು, 82 ಜನ ಗಾಯಗೊಂಡಿದ್ದಾರೆ ಅಂತ ಅಲ್ಲಿನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಅಲ್ದೇ ಭಾರಿ ಮಳೆಗೆ ಪಾಕ್‌ನಲ್ಲಿ ಒಟ್ಟು 2,715 ಮನೆಗಳಿಗೆ ಹಾನಿಯಾಗಿದ್ದು, ಕಟ್ಟಡಗಳ ಕುಸಿತ ಹಾಗೂ ಪ್ರವಾಹದಿಂದಲೆ ಹೆಚ್ಚಿನ ಜನ ಸಾವನ್ನಪ್ಪಿದ್ದಾರೆ ಅಂತ ವರದಿಯಾಗಿದೆ. ಇನ್ನು ಪಾಕ್‌ನ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಅತಿ ಹೆಚ್ಚು ಅಂದ್ರೆ 36 ಜನ ಪ್ರಾಣ ಕಳ್ಕೊಂಡಿದ್ದು, 53 ಜನ ಗಾಯಗೊಂಡಿದ್ದಾರೆ. ಇನ್ನು ಧಾರಾಕಾರ ಮಳೆಯಾದ ಪರಿಣಾಮ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌ ಆಸ್ತಿ-ಪಾಸ್ತಿಗಳನ್ನ ಕಳ್ಕೊಂಡ ಜನರಿಗೆ ತಕ್ಷಣವೇ ಅಗತ್ಯ ನೆರವು ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply