masthmagaa.com:
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್(PCB)ನ ಮುಖ್ಯಸ್ಥ ಜಾಕ ಅಶ್ರಫ್ ಸೇರಿದಂತೆ, ಹಲವು ಅಧಿಕಾರಿಗಳು ಪಾಕ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಬಾಬರ್ ಅಜಂರ ಮೆಸೇಜ್ಗೆ ರಿಪ್ಲೈ ಮಾಡ್ತಿಲ್ಲ. ಅಲ್ಲದೇ ಕಳೆದ ಐದು ತಿಂಗಳಿಂದ ಆಟಗಾರರಿಗೆ PCB ಸಂಬಳ ಕೂಡ ನೀಡಿಲ್ಲ ಅಂತ ಪಾಕ್ ಮಾಜಿ ನಾಯಕ ರಷಿದ್ ಲತೀಫ್ ಆಪಾದಿಸಿದ್ದಾರೆ. ನಿನ್ನೆ ಸೌತ್ ಆಫ್ರಿಕಾ ವಿರುದ್ಧದ ಸೋಲಿನ ನಂತರ TV ಷೋ ಒಂದರಲ್ಲಿ ರಷಿದ್ ಪಾಕ್ ಕ್ರಿಕೆಟ್ ಮ್ಯಾನೇಜ್ಮೆಂಟ್ನ್ನ ತರಾಟೆಗೆ ತಗೊಂಡಿದ್ದಾರೆ. ಆಟಗಾರರಿಗೆ ಸರಿಯಾಗಿ ರೆಸ್ಪಾಂಡ್ ಮಾಡಿಲ್ಲ ಅಂದ್ರೆ ಅವರೇಕೆ ನಿಮ್ಮ ಮಾತು ಕೇಳ್ತಾರೆ? ಅಂತ PCB ಯನ್ನ ಜಾಡಿಸಿದ್ದಾರೆ. ಅಂದ್ಹಾಗೆ ಈ ವರ್ಷದ ವಿಶ್ವಕಪ್ನಲ್ಲಿ 6 ಪಂದ್ಯ ಆಡಿರೊ ಪಾಕ್ ನಾಲ್ಕರಲ್ಲಿ ಸೋತು ಬೇಗನೆ ಎಲಿಮಿನೇಟ್ ಆಗೋ ಹಾಗೆ ಕಾಣ್ತಿದೆ. ದೊಡ್ಡ ಕಂಬ್ಯಾಕ್ ಮಾಡಲು ಎದುರು ನೋಡ್ತಿರೊ ಪಾಕ್ ತಂಡಕ್ಕೆ ಮ್ಯಾನೇಜ್ಮೆಂಟ್ ಸಪೋರ್ಟ್ ಇಲ್ದೇ ಇರೋದು ದುರಂತಾನೇ ಸರಿ.
-masthmagaa.com
Contact Us for Advertisement