ಪಾಕ್‌-ಭಾರತದ ವ್ಯಾಪಾರ ಸಂಬಂಧ ಸ್ಥಗಿತಕ್ಕೆ ಭಾರತ ಕಾರಣ: ಪಾಕ್‌

masthmagaa.com:

ಇತ್ತೀಚೆಗೆ ಭಾರತದೊಂದಿಗೆ ವ್ಯಾಪಾರ ನಡೆಸ್ಬೇಕಂತ ಪಾಕಿಸ್ತಾನದ ಉದ್ಯಮಿಗಳು ಸಿಕ್ಕಾಪಟ್ಟೆ ಆಸಕ್ತಿ ತೋರಿಸ್ತಿರೋದು ವರದಿಯಾಗಿತ್ತು. ಈ ನಡುವೆ ಪಾಕ್‌ ವಿದೇಶಾಂಗ ಸಚಿವರಾದ ಇಶಾಕ್‌ ದಾರ್‌, ಭಾರತ ಮತ್ತು ಪಾಕ್‌ ನಡುವಿನ ವ್ಯಾಪಾರ ಸಂಬಂಧ ನಿಂತ್ಹೋಗೋಕೆ ಭಾರತವೇ ಕಾರಣ ಅಂತೇಳಿದ್ದಾರೆ. ಪಾಕ್‌ ಸದನಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿರೋ ಇಶಾಕ್‌ ದಾರ್‌, ʻಪುಲ್ವಾಮಾ ದಾಳಿ ನಂತ್ರ, ಪಾಕ್‌ನಿಂದ ಆಮದಾಗೋ ಉತ್ಪನ್ನಗಳ ಮೇಲೆ ಭಾರತ ಸಿಕ್ಕಾಪಟ್ಟೆ ಟ್ಯಾಕ್ಸ್‌ ಹಾಕೋಕೆ ಟ್ರೈ ಮಾಡಿತ್ತು… ಸುಮಾರು 200%ನಷ್ಟು ಟ್ಯಾಕ್ಸ್‌ನ್ನ ಹೇರೋಕೆ ಡಿಸೈಡ್‌ ಮಾಡಿತ್ತು. LoC ಅಥ್ವಾ ಲೈನ್‌ ಆಫ್‌ ಕಂಟ್ರೋಲಾದ್ಯಂತ ಕಾಶ್ಮೀರ ಬಸ್‌ ಸರ್ವೀಸ್‌ ಮತ್ತು ವ್ಯಾಪಾರ ಸ್ಥಗಿತಗೊಳಿಸ್ತುʼ ಅಂತ ಆರೋಪ ಮಾಡಿದ್ದಾರೆ. ಅಂದ್ಹಾಗೆ ಕಳೆದ ಮಾರ್ಚ್‌ನಲ್ಲಿ ಲಂಡನ್‌ನ ಪ್ರೆಸ್‌ ಕಾನ್ಫರೆನ್ಸ್‌ ಒಂದ್ರಲ್ಲಿ, “ನಮ್ಮ ಪಾಕ್‌ ವ್ಯಾಪಾರಿಗಳು ಭಾರತದ ಜೊತೆ ವ್ಯಾಪಾರ ನಡೆಸೋಕೆ ಆಸಕ್ತಿ ತೋರಿಸ್ತಿದ್ದಾರೆ. ಭಾರತ ಜೊತೆ ಮತ್ತೆ ವ್ಯಾಪಾರ ಶುರು ಮಾಡಿಕೊಳ್ತೀವಿ ಅಂತ ಹೇಳಿದ್ರು. ಆದ್ರೆ ಈ ಹೇಳಿಕೆ ನೀಡಿದ ಕೆಲ ದಿನಗಳ ನಂತ್ರ, ಆ ರೀತಿ ನಮ್ಮದು ಯಾವ್ದೇ ಪ್ಲಾನ್ಸ್‌ ಇಲ್ಲ ಅಂತ ಪ್ಲೇಟ್‌ ಚೇಂಜ್‌ ಮಾಡಿದ್ರು. ಈಗ ವ್ಯಾಪಾರ ಸ್ಥಗಿತಗೊಂಡಿರೋಕೆ ಪಾಕ್‌ ಸದನಕ್ಕೆ ಕ್ಲಾರಿಫಿಕೇಶನ್‌ ಕೊಟ್ಟಿರೋ ಇಶಾಕ್‌ ದಾರ್‌… ಭಾರತದ ಕಡೆ ಬೊಟ್ಟು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply