masthmagaa.com:
ಪಿಎಲ್ ಟೂರ್ನಿಯ ಟೈಟಲ್ ಸ್ಪಾನ್ಸರ್ಶಿಪ್ ಹಕ್ಕು ಪಡೆಯೋ ರೇಸ್ನಲ್ಲಿ ಇದೀಗ ಮತ್ತೊಮ್ಮೆ ಟಾಟಾ ಗ್ರೂಪ್ ಗೆದ್ದಿದೆ. ಈ ಹಕ್ಕು ಪಡೆಯೋಕೆ ಆದಿತ್ಯ ಬಿರ್ಲಾ ಗ್ರೂಪ್ ಜನವರಿ 14 ರಂದು 2500 ಕೋಟಿ ರೂಪಾಯಿ ಬಿಡ್ ಮಾಡಿತ್ತು. ಇದೀಗ ಅಷ್ಟೇ ಅಮೌಂಟ್ನ್ನ ಟಾಟಾ ಗ್ರೂಪ್ ಬಿಡ್ ಮಾಡಿ ತನ್ನ ಟೈಟಲ್ ಸ್ಪಾನ್ಸರ್ ಹಕ್ಕು ಉಳಿಸಿಕೊಂಡಿದೆ. ಈ ಮೂಲಕ ಮುಂದಿನ 5 ವರ್ಷಗಳ ಕಾಲ ಅಂದ್ರೆ 2028ರ ವರೆಗೆ ಐಪಿಎಲ್ ಟೈಟಲ್ ಸ್ಪಾನ್ಸರ್ ಹಕ್ಕು ಟಾಟಾ ಸನ್ಸ್ ಪಾಲಾಗಿದೆ. ಅಂದ್ಹಾಗೆ ಎರಡೂ ಕಂಪನಿಗಳೂ ಒಂದೇ ಮೊತ್ತವನ್ನ ಬಿಡ್ ಮಾಡಿದ್ರೂ, ಪ್ರಸ್ತುತ ಟಾಟಾ ಗ್ರೂಪ್ ಈ ಹಕ್ಕನ್ನ ಹೊಂದಿರೋದ್ರಿಂದ ಟಾಟಾಗೆ ಆದ್ಯತೆ ನೀಡಲಾಗಿದೆ.
-masthmagaa.com
Contact Us for Advertisement