masthmagaa.com:
ಧಾರಾಕಾರ ಮಳೆ ಸುರಿತಿರೊ ಪರಿಣಾಮ 21 ಜನ ಮೃತಪಟ್ಟಿರೊ ಘಟನೆ ಇಂಡೊನೇಷ್ಯಾದಲ್ಲಿ ನಡೆದಿದೆ. ಅಲ್ಲಿನ ದೊಡ್ಡ ದ್ವೀಪ ಸುಮಾತ್ರಾದಲ್ಲಿ ಈ ಘಟನೆ ನಡೆದಿದ್ದು, 6ಜನ ಕಾಣೆಯಾಗಿದ್ದಾರೆ ಅಂತ ತಿಳಿದು ಬಂದಿದೆ. ಇನ್ನು ವರುಣನ ಅಬ್ಬರಕ್ಕೆ ಭಾರಿ ಪ್ರವಾಹ ಉಂಟಾದ ಪರಿಣಾಮ ಬರೊಬ್ಬರಿ 75 ಸಾವಿರ ಜನರನ್ನ ಬೇರೆಡೆ ಸ್ಥಳಾಂತರಿಸಲಾಗಿದೆ. ಮಳೆ ಜೊತೆಗೆ ಅಲ್ಲಲ್ಲಿ ಭೂ ಕುಸಿತ ಕೂಡ ಉಂಟಾಗಿದ್ದು, ಸದ್ಯ ಇಂಡೊನೇಷ್ಯಾ ಅಕ್ಷರಶಹಃ ನಲುಗಿ ಹೋಗಿದೆ. ಇನ್ನು ಜನರ ಪ್ರಾಣ ರಕ್ಷಣೆಗೆ ಅಲ್ಲಿನ ವಿಪತ್ತು ನಿರ್ವಹಣಾ ಪಡೆಗಳು ಹರಸಾಹಸ ಪಡ್ತಿವೆ.
-masthmagaa.com
Contact Us for Advertisement