masthmagaa.com:
ಕೇಂದ್ರ ಸರ್ಕಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡೋ ಫೇಕ್ ನ್ಯೂಸ್ ಪತ್ತೆಹಚ್ಚೋ ಫ್ಯಾಕ್ಟ್ ಚೆಕ್ ಯುನಿಟ್(FCU) ಕಾರ್ಯಚರಣೆಯನ್ನ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಈ ಮೂಲಕ ಬಾಂಬೆ ಹೈಕೋರ್ಟ್ ನೀಡಿರೋ ಆದೇಶವನ್ನ ಸುಪ್ರೀಂ ತಳ್ಳಿಹಾಕಿದೆ. ಮುಖ್ಯನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವ್ರ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಅಂದ್ಹಾಗೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಂಸ್ಥೆ, FCU ತಡೆಯಾಜ್ಞೆಗೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
-masthmagaa.com
Contact Us for Advertisement