masthmagaa.com:
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸಿಗ್ಬೇಕನ್ನೋ ಕೂಗಿಗೆ ಕೆಲ ತಿಂಗಳ ಹಿಂದಷ್ಟೇ ಟೆಕ್ ದಿಗ್ಗಜ ಎಲಾನ್ ಮಸ್ಕ್ ಅವ್ರು ಬೆಂಬಲ ಸೂಚಿಸಿ ಪೋಸ್ಟ್ ಒಂದನ್ನ ಮಾಡಿದ್ರು. ಇದೀಗ ಮಸ್ಕ್ರ ಆ ಹೇಳಿಕೆಗೆ ಅಮೆರಿಕ ರಿಯಾಕ್ಟ್ ಮಾಡಿದೆ. ಪ್ರೆಸ್ ಕಾನ್ಫರೆನ್ಸ್ ಒಂದ್ರ ವೇಳೆ ಮಾತನಾಡಿದ ಅಮೆರಿಕದ ವಿದೇಶಾಂಗ ವ್ಯವಹಾರಗಳ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್, ʻಈ ಬಗ್ಗೆ ನಾವು ಏನ್ ಮಾಡೋಕೂ ಆಗಲ್ಲ…ಇದು ನಮ್ಮ ಕೈಯಲ್ಲಿ ಇಲ್ಲ. ಆದ್ರೆ….ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿ ಇಡೀ ವಿಶ್ವಸಂಸ್ಥೆಯ ಸುಧಾರಣೆಯ ಅಗತ್ಯವಿದೆ. ನಾವಿದಕ್ಕೆ ಖಂಡಿತವಾಗ್ಲೂ ಸಪೋರ್ಟ್ ಮಾಡ್ತೀವಿʼ ಅಂತೇಳಿದ್ದಾರೆ. ಅಂದ್ಹಾಗೆ ಕಳೆದ ಜನವರಿ ತಿಂಗಳಲ್ಲಿ ಎಲಾನ್ ಮಸ್ಕ್ ಅವ್ರು, ಭಾರತಕ್ಕೆ ಶಾಶ್ವತ ಸದಸ್ಯತ್ವ ಸಿಗದೇ ಇರೋದು ಅಸಂಬದ್ಧ ಅಂತ ಕರೆದಿದ್ರು.
-masthmagaa.com
Contact Us for Advertisement