ಮಕ್ಕಳಿಗೂ ಕೊರೋನ ಲಸಿಕೆ ಕಡೆಗೂ ಬಂತು ನೋಡಿ

masthmagaa.com:

ಭಾರತದಲ್ಲಿ ಮಕ್ಕಳ ಕೊರೋನಾ ಲಸಿಕೆಗೆ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಸಿಗೋ ಸಾಧ್ಯತೆ ಇದೆ. ಅಂದ್ಹಾಗೆ 2ರಿಂದ 18 ವರ್ಷದ ಮಕ್ಕಳಿಗೆ ಹಾಕಬಹುದಾದ ಕೋವಾಕ್ಸಿನ್​​ ಲಸಿಕೆಯನ್ನ ಭಾರತದ ಔಷಧ ನಿಯಂತ್ರಣ ನಿರ್ದೇಶನಾಲಯಕ್ಕೆ ಶಿಫಾರಸು ಮಾಡಿದೆ ಸಬ್ಜೆಕ್ಟ್ ಎಕ್ಸ್​ಪರ್ಟ್ ಕಮಿಟಿ ಅಥವಾ SEC. DCGI ಕೂಡ ಇದಕ್ಕೆ ಓಕೆ ಅಂದ್ರೆ ಮಕ್ಕಳಿಗೆ ಲಸಿಕೆ ಚುಚ್ಚಲು ಅನುಮೋದನೆ ಸಿಕ್ಕಂತೆ. ಅಂದ್ಹಾಗೆ ಈ ಕೋವಾಕ್ಸಿನ್​ ಮಕ್ಕಳ ಲಸಿಕೆಯನ್ನ ಹೈದ್ರಾಬಾದ್​ ಮೂಲದ ಭಾರತ್​ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿದೆ. ಇದೇ ಕಂಪನಿಯ ಲಸಿಕೆಯನ್ನ ಈಗಾಗಲೇ ವಯಸ್ಕರಿಗೆ ಚುಚ್ಚಲಾಗ್ತಿದೆ. ಒಂದ್ವೇಳೆ ಮಕ್ಕಳ ಲಸಿಕೆಗೆ ಅನುಮೋದನೆ ಸಿಕ್ರೆ ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಮಕ್ಕಳ ಕೊರೋನಾ ಲಸಿಕೆ ಎನಿಸಿಕೊಳ್ಳಲಿದೆ ಕೋವಾಕ್ಸಿನ್​. 2ರಿಂದ 18 ವರ್ಷದ ಮಕ್ಕಳ ಮೇಲೆ ಈ ಲಸಿಕೆಯನ್ನ ಪ್ರಯೋಗ ಮಾಡಿದ ಡೇಟಾವನ್ನ ಭಾರತ್​ ಬಯೋಟೆಕ್​ ಕಂಪನಿ ಸಲ್ಲಿಸಿದ ಆಧಾರದ ಮೇಲೆ ಸಬ್ಜೆಕ್ಟ್ ಎಕ್ಸ್​ಪರ್ಟ್ ಕಮಿಟಿ ಶಿಫಾರಸು ಮಾಡಿದೆ.

-masthmagaa.com

Contact Us for Advertisement

Leave a Reply