masthmagaa.com:
ನಾಗಾಲ್ಯಾಂಡ್ನ ಮೋನ್ ಜಿಲ್ಲೆಯಲ್ಲಿ ಯೋಧರ ಗುಂಡಿಗೆ 14 ಮಂದಿ ನಾಗರಿಕರು ಬಲಿಯಾಗಿದ್ದರ ವಿರುದ್ಧದ ಪ್ರತಿಭಟನೆ ಈಗ ರಾಜಧಾನಿ ಕೋಹಿಮಾಗೂ ತಲುಪಿದೆ. ಬುಡಕಟ್ಟು ಜನಾಂಗದ ಸಂಘಟನೆಗೆ ಸೀಮಿತವಾಗಿದ್ದ ಪ್ರತಿಭಟನೆಯಲ್ಲಿ ಈಗ ವಿದ್ಯಾರ್ಥಿ ಸಂಘಟನೆಯಾದ ನಾಗಾ ಸ್ಟೂಡೆಂಟ್ ಫೆಡರೇಷನ್ ಕೂಡ ಧುಮುಕಿದೆ. ಕೋಹಿಮಾದಲ್ಲಿಂದು ಸಾವಿರಾರು ಮಂದಿ ರಸ್ತೆಗಿಳಿದು ನ್ಯಾಯ ದೊರಕಿಸಿ ಕೊಡಬೇಕು ಮತ್ತು AFSPAಯನ್ನು ವಾಪಸ್ ಪಡೆಯಬೇಕು ಅಂತ ಒತ್ತಾಯಿಸಿದ್ದಾರೆ.
-masthmagaa.com
Contact Us for Advertisement