masthmagaa.com:
ಹೈಟಿ ಪ್ರಧಾನಿ ಏರಿಯಲ್ ಹೆನ್ರಿ ಹತ್ಯೆಗೆ ಪ್ರಯತ್ನ ನಡೆದಿದೆ ಅಂತ ಖುದ್ದು ಅವರೇ ಮಾಹಿತಿ ನೀಡಿದ್ದಾರೆ. ಸಂದರ್ಶನದಲ್ಲಿ ಮಾತಾಡಿದ ಅವರು, ಕಳೆದ ವೀಕೆಂಡ್ನಲ್ಲಿ ನ್ಯಾಷನಲ್ ಡೇ ಸಂಭ್ರಮಾಚಾರಣೆ ವೇಳೆ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. ನನ್ನ ಜೀವ ಅಪಾಯದಲ್ಲಿದೆ ಅಂತ ಹೇಳಿದ್ದಾರೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ ಅಧ್ಯಕ್ಷ ಜೊವೆನಲ್ ಮೋಸೆಯನ್ನು ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಪ್ರಧಾನಿ ಏರಿಯಲ್ ಹೆನ್ರಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಆದ್ರೆ ಶನಿವಾರ ನ್ಯಾಷನಲ್ ಡೇ ಸಂಭ್ರಮಾಚರಣೆ ವೇಳೆ ಪೊಲೀಸರು ಮತ್ತು ಸೇನಾ ಪಡೆಯ ನಡುವೆಯೇ ಸಂಘರ್ಷ ಶುರುವಾಗಿತ್ತು. ಈ ಕಾರ್ಯಕ್ರಮಕ್ಕೂ ಕೆಲ ವಾರಗಳ ಹಿಂದೆ ನಮ್ಮ ನಗರಕ್ಕೆ ಏರಿಯಲ್ ಹೆನ್ರಿ ಭೇಟಿ ನೀಡಬಾರದು ಅಂತ ಜನ ಮತ್ತು ಶಸ್ತ್ರಾಸ್ತ್ರ ಸಜ್ಜಿತ ಗ್ಯಾಂಗ್ ಸದಸ್ಯರು ಎಚ್ಚರಿಸಿದ್ದರು.
-masthmagaa.com
Contact Us for Advertisement