masthmagaa.com:
ರಷ್ಯಾ ಅಧ್ಯಕ್ಷ ಪುಟಿನ್ರನ್ನ ಜೋ ಬೈಡನ್ ವಾರ್ ಕ್ರಿಮಿನಲ್ ಅಂತ ಕರೆದಿದ್ದಕ್ಕೆ ರಷ್ಯಾ, ಅಮೇರಿಕದ ರಾಯಭಾರಿ ಜಾನ್ ಸುಲ್ಲಿವನ್ರನ್ನ ಕರೆದು ತನ್ನ ಆಕ್ರೋಶವನ್ನ ವ್ಯಕ್ತಪಡಿಸಿದೆ. ಈ ಬಗ್ಗೆ ರಷ್ಯಾ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದ್ದು, ಅಮೇರಿಕ ಅಧ್ಯಕ್ಷರು ಈ ರೀತಿಯ ಹೇಳಿಕೆ ನೀಡೋದು ಅವರ ಸ್ಥಾನಕ್ಕೆ ತಕ್ಕುದಾದುದಲ್ಲ. ಇದ್ರಿಂದ ರಷ್ಯಾ-ಅಮೇರಿಕ ಸಂಬಂಧವನ್ನ ಅವರು ಸಂಪೂರ್ಣ ಹದಗೆಡಿಸಿದ್ದಾರೆ ಅಂತ ಹೇಳಿದೆ. ಜೊತೆಗೆ ರಷ್ಯಾ ವಿರುದ್ಧ ದ್ವೇಷದ ಕ್ರಮಗಳನ್ನ ತಗೊಂಡ್ರೆ ಅದ್ಕೆ ತಕ್ಕ ಪ್ರತಿಕ್ರಿಯೆ ಎದುರಿಸಬೇಕಾಗುತ್ತೆ ಅಂತ ಎಚ್ಚರಿಸಲಾಗಿದೆ ಅಂತ ವಿದೇಶಾಂಗ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
-masthmagaa.com
Contact Us for Advertisement