masthmagaa.com:
ಬಿಸಿಸಿಐನ ಸಂವಿಧಾನದಲ್ಲಿ ತಿದ್ದುಪಡಿ ಮಾಡೋಕೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವ್ರು ಮತ್ತೊಂದ್ ಅವಧಿಗೆ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ. ಅಂದ್ಹಾಗೆ ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಹಾಗೂ ಕಾರ್ಯದರ್ಶಿಯಾಗಿ ಜಯ್ ಶಾ ಮತ್ತೊಂದ್ ಅವಧಿಗೆ ಮುಂದುವರೀಬೇಕು ಅಂತ ಬಿಸಿಸಿಐ ತನ್ನ ಸಂವಿಧಾನ ತಿದ್ದುಪಡಿಗೆ ಅವಕಾಶ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅದ್ರಲ್ಲಿ ಕೂಲಿಂಗ್ ಆಫ್ ಪಿರಿಯಡ್ ಅಂದ್ರೆ ಒಂದು ಅಧಿಕಾರದಲ್ಲಿದ್ದೋರು ಮತ್ತೊಂದು ಅವಧಿಗೆ ಅಧಿಕಾರ ವಹಿಸಿಕೊಳ್ಳೋ ಬೇಕಂದ್ರೆ ಕನಿಷ್ಟ ಇಂತಿಷ್ಟು ಸಮಯದವರೆಗೆ ಕಾಯಬೇಕಾಗುತ್ತೆ. ಈ ನಿಯಮವನ್ನ ರದ್ದುಗೊಳಿಸೋಕೆ ಅನುಮತಿ ನೀಡಿ ಅಂತ ಬಿಸಿಸಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂಕೋರ್ಟ್ ಕೂಲಿಂಗ್ ಅಫ್ ಪಿರಿಯಡ್ ನಿಯಮ ರದ್ದುಗೊಳಿಸೋಕೆ ಅವಕಾಶ ಇದೆ ಅಂತ ಹೇಳಿದೆ.
-masthmagaa.com
Contact Us for Advertisement