masthmagaa.com:
ಜಿ20 ಗುಂಪಿನ ಸಭೆಯ ಅಧ್ಯಕ್ಷತೆಯನ್ನ ಭಾರತ ವಹಿಸಿಕೊಂಡಿದ್ದು, 2023ರ ಜಿ20 ಶೃಂಗಸಭೆ ಭಾರತದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ಜಿ20 ಪೂರಕ ಸಭೆಗಳನ್ನ ಭಾರತ ನಡೆಸುತ್ತಿದೆ. ಅದರಂತೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲೂ ಮೇ ತಿಂಗಳಲ್ಲಿ ಸಭೆ ಮಾಡಲಾಗುತ್ತೆ ಅಂತ ಭಾರತ ಹೇಳಿದೆ. ಇದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸುತ್ತಿದೆ. ಇತ್ತೀಚೆಗೆ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಜಿ20 ಸಭೆ ನಡೆಸಿದಾ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಚೀನಾಗೆ ಸೊಪ್ಪು ಹಾಕ ಭಾರತ ಅರುಣಾಚಲ ನಮ್ಮದು ಹಾಗೂ ಕಾಶ್ಮೀರ ಕೂಡ ಭಾರತ ಅವಿಭಾಜ್ಯ ಅಂತ ನಾವು ಎಲ್ಲಿ ಬೇಕಾದ್ರೂ ಸಭೆ ನಡೆಸ್ತೀವಿ. ಅದೇ ರೀತಿ ಶ್ರೀನಗರದಲ್ಲೂ ಸಭೆ ನಡೆಸುತ್ತೇವೆ ಅಂತಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ ರವಾನಿಸಿದೆ.
-masthmagaa.com
Contact Us for Advertisement