masthmagaa.com:
ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಗಾಸಿಪ್ಗಳು ಹರಿದಾಡ್ತಾ ಇದೆ. ಇಲ್ಲಿಯವರೆಗೂ ತಮ್ಮ ಮದುವೆ ಗಾಸಿಪ್ ಬಗ್ಗೆ ಪರಿಣಿತಿ ಚೋಪ್ರಾ ಆಗಲಿ ಅಥ್ವಾ ರಾಘವ್ ಚಡ್ಡಾ ಆಗಲಿ ಮಾತಾಡಿಲ್ಲ. ಈ ಹಿಂದೆ ಮಾಧ್ಯಮದ ಜೊತೆ ಮಾತನಾಡಿದ ಪರಿಣಿತಿ ಚೋಪ್ರಾ ” ಸುಳ್ಳು ಸುದ್ದಿ ಹಬ್ಬಿದ್ರೆ ನಾನು ಅದಕ್ಕೆ ಕ್ಲಾರಿಫಿಕೇಷನ್ ಕೊಡ್ತೀನಿ, ನಿಜ ಆಗಿದ್ರೆ ಅದರ ಬಗ್ಗೆ ಮಾತಾಡೋದಿಲ್ಲ” ಅಂತ ಹೇಳಿದ್ರು. ಈಗಿನ ವರದಿಯ ಪ್ರಕಾರ, ಈ ಜೋಡಿ ಅಕ್ಟೋಬರ್ 2023 ರಲ್ಲಿ ಹಸೆಮನೆ ಏರಲಿದ್ದಾರೆ ಅನ್ನೋ ನಿರೀಕ್ಷೆ ಇದೆ. ಪರಿಣಿತಿ ಮತ್ತು ರಾಘವ್ ಈಗಾಗಲೇ ತಮ್ಮ ಎಂಗೇಜ್ಮೆಂಟ್ನ್ನ ದೆಹಲಿಯಲ್ಲಿ ಮಾಡ್ಕೊಂಡಿದ್ರು ಅಂತ ಕೂಡ ಸುದ್ದಿಯಾಗಿತ್ತು.
ಮುಂಬೈನ ಫೇಮಸ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮನೆಗೆ ಪರಿಣಿತಿ ಚೋಪ್ರಾ ಭೇಟಿ ಕೊಟ್ಟಿದ್ರು. ಇದೆಲ್ಲಾ ನೋಡಿದ್ರೆ ಈ ಜೋಡಿ ಅಕ್ಟೋಬರ್ನಲ್ಲಿ ಮದುವೆಯಾಗಲಿದ್ದಾರೆ ಅಂತ ಮಾಧ್ಯಮವೊಂದು ವರದಿಮಾಡಿದೆ.
-masthmagaa.com
Contact Us for Advertisement