ಸೋಶಿಯಲ್‌ ಮೀಡಿಯಾಗಳಿಂದ ಭಾರೀ ಖಾಸಗಿ ಮಾಹಿತಿ ಲೀಕ್‌!

masthmagaa.com:

ಭಾರಿ ಗಾತ್ರದ ಪರ್ಸನಲ್‌ ಡೇಟಾಗಳ ಲೀಕ್‌ ವಿಚಾರವನ್ನ ಅಮೆರಿಕದ ಫೋರ್ಬ್ಸ್‌ ಮ್ಯಾಗ್ಜೀನ್‌ ರಿಪೋರ್ಟ್‌ ಮಾಡಿದೆ. ಇದ್ರ ಪ್ರಕಾರ 26 ಬಿಲಿಯನ್‌ ಅಂದ್ರೆ 2,600 ಕೋಟಿ ಪರ್ಸನಲ್‌ ರೆಕಾರ್ಡ್‌ಗಳು ಇದೀಗ ಸೋರಿಕೆಯಾಗಿದೆ. ಇದುವರೆಗಿನ ಪರ್ಸನಲ್‌ ರೆಕಾರ್ಡ್ಸ್‌ ಲೀಕ್‌ ಆಗಿರೋ ಪೈಕಿ ಇದು ಅತ್ಯಂತ ದೊಡ್ಡ ಲೀಕ್ ಅಂತ ಹೇಳಲಾಗಿದೆ. ಅಂದ್ಹಾಗೆ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ `X’, ಲಿಂಕಡ್‌ಇನ್‌ ಮತ್ತು ಡ್ರಾಪ್‌ಬಾಕ್ಸ್‌ನಿಂದ ಯುಸರ್‌ಗಳ ಪರ್ಸನಲ್‌ ಮಾಹಿತಿಗಳು ಲೀಕ್‌ ಆಗಿದೆ. ಈ ಮೂಲಕ ಒಟ್ಟು 12 ಟೆರಾಬೈಟ್ಸ್‌ ಮಾಹಿತಿ ಎಕ್ಸ್‌ಪೋಸ್‌ ಆಗಿದೆ ಅನ್ನೋ ವಿಚಾರ ಬಯಲಾಗಿದೆ.

-masthmagaa.com

Contact Us for Advertisement

Leave a Reply