ಯೋಧರಿಗಾಗಿ ಸ್ಪೆಷಲ್‌ ಹೆಲ್ಮೆಟ್‌ ತಯಾರಿಸಿದ ಎಮ್‌ಕೆಯು ಕಂಪನಿ! ವಿಶೇಷತೆಗಳೇನು?

masthmagaa.com:

ಕಾನ್ಪುರ ಮೂಲದ ಎಮ್.ಕೆ.ಯು ಅನ್ನೊ ಕಂಪನಿ ಯೋಧರಿಗಾಗಿ ವಿಶೇಷ ಹೆಲ್ಮೆಟ್ ಒಂದನ್ನ ತಯಾರಿಸಿದೆ. ಇದು ಬುಲೆಟ್ ಪ್ರೂಫ್ ಹೆಲ್ಮೆಟ್ ಆಗಿದ್ದು, ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಯಾರಿಸಲಾಗಿದೆ. ಈ ಹೆಲ್ಮೆಟ್​​​ಗಳು , ಕಡಿಮೆ ತೂಕ ಮತ್ತು ಧರಿಸಲು ಕಂಫರ್ಟಬಲ್‌ ಆಗಿವೆ. ತಲೆಯ ಗಾತ್ರವನ್ನು ಅವಲಂಬಿಸಿ ಇದರ ತೂಕವ 1.2 ಕೆಜಿಯಿಂದ 1.4 ಕೆಜಿಯವರೆಗೆ ಇರಲಿದೆ. ಯುದ್ಧದ ಸಮಯದಲ್ಲಿ ಯೋಧರಿಗೆ ಆಗುವ ಗಾಯಗಳಿಂದ ರಕ್ಷಣೆ ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಹೊಸ ಹೆಲ್ಮೆಟ್ ಫೇಸ್‌ ಶೀಲ್ಡ್, ಟಾರ್ಚ್ ಮತ್ತು ರಾತ್ರಿ ದೃಷ್ಟಿ ಕನ್ನಡಕ ಸೇರಿದಂತೆ ವಿವಿಧ ಪರಿಕರಗಳನ್ನು ಒಳಗೊಂಡಿದೆ. ನಾವು ಈ ಉಪಕರಣಗಳನ್ನು ಸಶಸ್ತ್ರ ಪಡೆಗಳಿಗೆ ಪೂರೈಸುತ್ತಿದ್ದೇವೆ. ಈ ಉತ್ಪನ್ನವನ್ನು ಅಭಿವೃದ್ಧಿಪಡಿಸಿರುವ ನಮಗೆ ಅದಕ್ಕೆ ಪೇಟೆಂಟ್ ಕೂಡಾ ಸಿಕ್ಕಿದೆ ಅಂತ ಕಂಪನಿಯ ಚೇರ್ಮನ್‌ ಮನೋಜ್ ಗುಪ್ತಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply