ವಿಸ್ತರಣೆಯಾಯ್ತು ಅರವಿಂದ್‌ ಕೇಜ್ರಿವಾಲ್‌ ನ್ಯಾಯಾಂಗ ಬಂಧನ!

masthmagaa.com:

ನ್ಯಾಯಾಂಗ ಬಂಧನದಲ್ಲಿರೋ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರಿಗೆ ಇನ್ಸುಲಿನ್‌ ನೀಡೋಕೆ ನಿರಾಕರಿಸಲಾಗ್ತಿದೆ. ಅವ್ರ ಹತ್ಯೆ ಮಾಡೋಕೆ ಸಂಚು ರೂಪಿಸಲಾಗ್ತಿದೆ ಅಂತ ಆಪ್‌ ಆರೋಪ ಮಾಡಿತ್ತು. ಆದ್ರೆ ಇದೀಗ ಇನ್ಸುಲಿನ್‌ ಕೊಟ್ಟಿದ್ದಾರೆ ಅಂತ ಆಪ್‌ ಹೇಳಿದೆ. ʻಕೊನೆಗೂ ಬಿಜೆಪಿ ಮತ್ತು ಜೈಲಿನ ಆಡಳಿತಕ್ಕೆ ಬುದ್ದಿ ಬಂತು ಅನ್ಸುತ್ತೆ…ಇನ್ಸುಲಿನ್‌ ಕೊಟ್ಟಿದ್ದಾರೆ. ಕೇಜ್ರಿವಾಲ್‌ರ ಶುಗರ್‌ ಲೆವೆಲ್‌ 320ಕ್ಕೆ ರೀಚ್‌ ಆಗಿತ್ತು. ಇದೆಲ್ಲ ಆಂಜನೇಯ ದೇವರ ಕೃಪೆಯಿಂದ ಸಾಧ್ಯವಾಯ್ತುʼ ಅಂತ ಆಪ್‌ ಹೇಳಿದೆ. ಇನ್ನೊಂದ್ಕಡೆ ದಿಲ್ಲಿ ಮದ್ಯ ಹಗರಣ ಸಂಬಂಧ ಅರವಿಂದ್‌ ಕೇಜ್ರಿವಾಲ್‌ರ ನ್ಯಾಯಾಂಗ ಬಂಧನವನ್ನ ದಿಲ್ಲಿ ಕೋರ್ಟ್‌ ಮೇ 07ರ ತನಕ ವಿಸ್ತರಿಸಿದೆ. ಜೊತೆಗೆ ಬಿಆರ್‌ಎಸ್‌ ನಾಯಕಿ ಕೆ ಕವಿತಾ ಮತ್ತು ಗೋವಾ ಎಲೆಕ್ಷನ್‌ನಲ್ಲಿ ಆಮ್‌ ಆದ್ಮಿ ಪಾರ್ಟಿಯ ಫಂಡ್‌ ಮ್ಯಾನೇಜರ್‌ ಆಗಿದ್ದ ಅಂತೇಳಲಾಗಿರೋ ಚನ್ಪ್ರೀತ್‌ ಸಿಂಗ್‌ ಅವ್ರಿಗೂ ಮೇ 07ರ ತನಕ ಎಕ್ಸ್ಟೆಂಡ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply