ಕೇಜ್ರಿವಾಲ್‌ಗೆ ಇನ್ಸುಲಿನ್‌ ಕೊಡಿಸದೇ ಹತ್ಯೆಗೆ ಪ್ರಯತ್ನ: AAP

masthmagaa.com:

ನ್ಯಾಯಾಂಗ ಬಂಧನದಲ್ಲಿರೋ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವ್ರಿಗೆ ಇನ್ಸುಲಿನ್‌ ನೀಡೋ ವ್ಯವಸ್ಥೆ ಮಾಡಿಕೊಡೋಕೆ ದೆಹಲಿ ಕೋರ್ಟ್‌ಗೆ ಮನವಿ ಮಾಡಿಕೊಳ್ಳಲಾಗಿದೆ. ಈ ವೇಳೆ ಕೇಜ್ರಿವಾಲ್‌ ಅವ್ರು, ʻಜಾರಿ ನಿರ್ದೇಶನಾಲಯ ಅಧಿಕಾರಿಗಳು ಇನ್ಸುಲಿನ್‌ ಪಡೆಯೋಕೆ ಅವಕಾಶ ಮಾಡ್ಕೊಡಿ ಅಂತ ಕೇಳಿದ್ರೆ ನಿರಾಕರಿಸಿದ್ದಾರೆ. ಸಣ್ಣಪುಟ್ಟ ಮನವಿಯನ್ನೂ ವಿರೋಧಿಸಿ…ರಾಜಕೀಯ ವರ್ತನೆ ತೋರಿಸ್ತಿದ್ದಾರೆʼ ಅಂತ ಆರೋಪ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವ್ರ ವಕೀಲರು, ʻಕೇಜ್ರಿವಾಲ್‌ ಅವ್ರು ಕಳೆದ 12 ವರ್ಷಗಳಿಂದ ಇನ್ಸುಲಿನ್‌ ಪಡೀತಿದ್ರು ಅಂತೇಳಿದ್ದಾರೆ. ಇನ್ನು ಕೇಜ್ರಿವಾಲ್‌ರಿಗೆ ಇಡಿ ಅಧಿಕಾರಿಗಳು ಇನ್ಸುಲಿನ್‌ ನೀಡೋಕೆ ವಿರೋಧಿಸ್ತಿರೋ ಸಂಬಂಧ ಆಮ್‌ ಆದ್ಮಿ ಪಾರ್ಟಿ ರಿಯಾಕ್ಟ್‌ ಮಾಡಿದೆ. ತಿಹಾರ್‌ ಜೈಲಿನಲ್ಲಿ ಕೇಜ್ರಿವಾಲ್‌ರಿಗೆ ಇನ್ಸುಲಿನ್‌ ನೀಡಲಾಗ್ತಿಲ್ಲ.. ಟೈಪ್‌ 2 ಡಯಾಬಿಟಿಸ್‌ನಿಂದ ಬಳಲ್ತಿರೋ ಅವ್ರಿಗೆ ತಮ್ಮ ಡಾಕ್ಟರ್‌ನ ಕನ್ಸಲ್ಟ್‌ ಮಾಡೋಕೂ ಅಡ್ಡಿ ಮಾಡಲಾಗ್ತಿದೆ. ಈ ರೀತಿ ಮಾಡಿ ಅವ್ರನ್ನ ನಿಧಾನವಾಗಿ ಹತ್ಯೆ ಮಾಡೋಕೆ ಸಂಚು ರೂಪಿಸಲಾಗ್ತಿದೆʼ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply