ಬ್ರಿಟನ್‌ ಜನಾಂಗೀಯ ದೇಶ ಅಲ್ಲ: ರಿಷಿ ಸುನಾಕ್‌

masthmagaa.com:

ಬ್ರಿಟನ್‌ ಒಂದು ಜನಾಂಗೀಯ ದೇಶ ಅಂತ ನಾನು ನಂಬೋದಿಲ್ಲ ಅಂತ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಹೇಳಿದ್ದಾರೆ. ಇತ್ತೀಚೆಗೆ ಆಫ್ರಿಕ-ಅಮೆರಿಕ ಮೂಲದವ್ರಾದ ಫ್ರಿನ್ಸ್‌ ಹ್ಯಾರಿ ಅವ್ರ ಪತ್ನಿ ಮೇಘನ್‌ ಮಾರ್ಕೆಲ್‌ ಅವ್ರ ಮೇಲೆ ವಿವಾದಾತ್ಮಕ ಟೀಕೆಗಳು ಕೇಳಿ ಬಂದಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಸುನಾಕ್‌, ನಾನು ದೇಶದ ಮೊದಲ ಏಷ್ಯಾ ಮೂಲದ ಪ್ರಧಾನಿ ಆಗಿದ್ದೇನೆ, ಅದನ್ನ ಹೇಳುವಾಗ ಅದಕ್ಕೆ ಒಂದು ತೂಕವಿದೆ. ಹಾಗಾಗಿ ಬ್ರಿಟನ್‌ ಜನಾಂಗೀಯ ದೇಶ ಅಂತ ನನಗೆ ಅನ್ಸಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ಜೆರೆಮಿ ಕ್ಲಾರ್ಕ್ಸನ್ ಅನ್ನೋ ಪತ್ರಕರ್ತ ಮೇಘನ್‌ ಮಾರ್ಕೆಲ್‌ ಬಗ್ಗೆ ಬರೆದಿರೋ ಆರ್ಟಿಕಲ್‌ ವಿವಾದವನ್ನ ಸೃಷ್ಟಿಸಿತ್ತು. ಆರ್ಟಿಕಲ್‌ ವಿರುದ್ದ ಸುಮಾರು 6 ಸಾವಿರ ಕಂಪ್ಲೇಟ್ಸ್‌ ಬಂದ ಹಿನ್ನಲೆಯಲ್ಲಿ ಆರ್ಟಿಕಲ್‌ನ್ನ ಡಿಲೀಟ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply